ನೆಗೆಟಿವ್ ಕಾಮೆಂಟ್ ಗಳಿಂದ ಲೈಗರ್ ಗಳಿಕೆಗೆ ಪೆಟ್ಟು

ಶುಕ್ರವಾರ, 26 ಆಗಸ್ಟ್ 2022 (09:00 IST)
ಹೈದರಾಬಾದ್: ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಿನ್ನೆ ಬಿಡುಗಡೆಯಾಗಿತ್ತು.

ಆದರೆ ನಿರೀಕ್ಷಿಸಿದಷ್ಟು ಹಣ ಗಳಿಸಲು ಸಾಧ‍್ಯವಾಗಿಲ್ಲ. ಇದಕ್ಕೆ ಕಾರಣ ನೆಗೆಟಿವ್ ಕಾಮೆಂಟ್. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ಅಭಿಪ್ರಾಯಗಳು ಬಂದಿವೆ. ನಿರೀಕ್ಷಿಸಿದಷ್ಟು ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿತ್ತು. ಇದು ಚಿತ್ರದ ಗಳಿಕೆಗೆ ತೊಂದರೆ ಮಾಡಿದೆ.

ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಲೈಗರ್ ಮೊದಲ ದಿನ ಗಳಿಸಿದ್ದು 20 ರಿಂದ 25 ಕೋಟಿ ರೂ. ಪ್ರಿ ಬುಕಿಂಗ್ ನಿಂದಾಗಿ ಚಿತ್ರ ಇಷ್ಟರಮಟ್ಟಿಗೆ ಗಳಿಕೆ ಮಾಡಲು ಸಾಧ್ಯವಾಗಿದೆ. ಆದರೆ ನೆಗೆಟಿವ್ ಪ್ರತಿಕ್ರಿಯೆಗಳು ಬಂದ ಮೇಲೆ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ