ಲೈಗರ್ ರಿಲೀಸ್ ಗೆ ಕ್ಷಣಗಣನೆ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಹೊರಟ ವಿಜಯ್ ದೇವರಕೊಂಡ

ಬುಧವಾರ, 24 ಆಗಸ್ಟ್ 2022 (16:59 IST)
ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಲೈಗರ್ ಸಿನಿಮಾ ನಾಳೆಯಿಂದ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಈ ಸಿನಿಮಾ ಮೂಲಕ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಲು ಹೊರಟಿದೆ.

ಈಗಾಗಲೇ ಪ್ರಿ ಬುಕಿಂಗ್ ಗೆ ಭರ್ಜರಿ ಬೇಡಿಕೆ ಬಂದಿದ್ದು, ಮೊದಲ ದಿನದ ಶೋಗಳು ಭರ್ತಿಯಾಗಿವೆ. ಹೀಗಾಗಿ ಚಿತ್ರ ಮೊದಲ ದಿನವೇ ದಾಖಲೆಯ ಗಳಿಕೆ ಮಾಡುವುದು ಖಚಿತ ಎನ್ನಲಾಗಿದೆ. ವಿಜಯ್ ದೇವರಕೊಂಡ ಜೊತೆಗೆ ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ, ರಮ್ಯಾ ಕೃಷ್ಣ, ಮೈಕ್ ಟೈಸನ್ ಸೇರಿದಂತೆ ಘಟಾನುಘಟಿಗಳ ತಾರಾಗಣವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ