ಹೈದರಾಬಾದ್ : ಯುವ ನಟ ನಾಗಚೈತನ್ಯ ಅಭಿನಯದ ‘ಲವ್ ಸ್ಟೋರಿ’ ಚಿತ್ರ ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಈ ಚಿತ್ರಕ್ಕೆ ಇದೀಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಂಟಕವಾಗಿದ್ದಾರೆ ಎನ್ನಲಾಗಿದೆ.
ಹೌದು. ಲವ್ ಸ್ಟೋರಿ’ ಚಿತ್ರ ನಿರ್ದೇಶಕ ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಚಿತ್ರಕ್ಕಾಗಿ ಹೆಚ್ಚು ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಆದರೆ ‘ವಕೀಲ್ ಸಾಬ್’ ಚಿತ್ರದ ಕಾರಣ ‘ಲವ್ ಸ್ಟೋರಿ’ ಚಿತ್ರದ ಆದಾಯದ ಮೇಲೆ ಪೆಟ್ಟು ಬೀಳಲಿದೆಯೇ ಎಂಬ ಚಿಂತೆ ನಿರ್ಮಾಪಕರನ್ನು ಕಾಡುತ್ತಿದೆ.
ಯಾಕೆಂದರೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ರಿ ಎಂಟ್ರಿ ಚಿತ್ರ’ ವಕೀಲ್ ಸಾಬ್’ ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ. ಸ್ಟಾರ್ ನಟನ ಚಿತ್ರದ ಎಫೆಕ್ಟ್ ‘ಲವ್ ಸ್ಟೋರಿ’ ಚಿತ್ರದ ಆರಂಭಿಕ ಸಂಗ್ರಹದ ಮೇಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.