ಅಲ್ಲು ಅರ್ಜುನ್ ‘ಪುಷ್ಪಾ’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ
ಶುಕ್ರವಾರ, 29 ಜನವರಿ 2021 (10:05 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಶನ್ ನಲ್ಲಿ ಪುಷ್ಪಾ ಚಿತ್ರ ಮೂಡಿಬರಲಿದೆ. ಇದೀಗ ಈ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.
ಕೆಂಪು ಶ್ರೀಗಂಧ ಕಳ್ಳಸಾಗಾಣಿಕೆಯ ಹಿನ್ನಲೆಯಲ್ಲಿ ರೂಪಿಸಲಾದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆಯಾಗಿ ಆಗಸ್ಟ್ 13ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ, ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿದೆ.