ಲಕ್ಕಿಮ್ಯಾನ್ ಟೀಸರ್ ಇಂದು ಲಾಂಚ್: ಪುನೀತ್ ನೋಡಲು ಫ್ಯಾನ್ಸ್ ತವಕ
ಡಾರ್ಲಿಂಗ್ ಕೃಷ್ಣ ನಾಯಕರಾಗಿ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಪ್ರಭುದೇವ ಜೊತೆಗೆ ನೃತ್ಯವೊಂದನ್ನೂ ಮಾಡಿದ್ದಾರೆ. ಪ್ರಭುದೇವ ಸಹೋದರ ನಾಂಗೇಂದ್ರ ಪ್ರಸಾದ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಇದು ಎನ್ನುವ ಕಾರಣಕ್ಕೆ ಅಭಿಮಾನಿಗಳು ಈ ಸಿನಿಮಾಗಾಗಿ ಎದಿರು ನೋಡುತ್ತಿದ್ದಾರೆ. ಆಗಸ್ಟ್ ನಲ್ಲಿ ಚಿತ್ರ ತೆರೆ ಕಾಣುತ್ತಿದೆ.