ಥಿಯೇಟರ್‌ನಲ್ಲಿ ಗಂಡನನ್ನು ನೆನೆದು ಕಣ್ಣೀರು ಹಾಕಿದ ಮಡೆನೂರು ಮನು ಪತ್ನಿ, ಹೇಳಿದ್ದೇನು ಗೊತ್ತಾ

Sampriya

ಶುಕ್ರವಾರ, 23 ಮೇ 2025 (14:56 IST)
ಬೆಂಗಳೂರು: ರೇಪ್‌ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಪತಿಯನ್ನು ನೆನೆದು ಮಡೆನೂರು ಮನು ಪತ್ನಿ ಕಣ್ಣೀರು ಹಾಕಿದ್ದಾರೆ.

ಕುಲದಲ್ಲಿ ಕೀಳ್ಯಾವುದು ಸಿನಿಮಾ ಇಂದು ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಗಡೆಯ ಹಿಂದಿನ ದಿನ ಮಡೆನೂರು ಮನು ವಿರುದ್ಧ ಸಹಕಲಾವಿದೆ ನೀಡಿದ ರೇಪ್‌ ಕೇಸ್‌ನಲ್ಲಿ ಬಂಧನವಾಗಿದ್ದಾರೆ.

ಸಿನಿಮಾ ನೋಡಲು ಥಿಯೇಟರ್‌ಗೆ ಬಂದ ಮಡೆನೂರು ಮನು ಪತ್ನಿ, ತನ್ನ ಪತಿಯ ಸಿನಿಮಾವನ್ನು ಟಾರ್ಗೆಟ್ ಮಾಡಿ ಈ ರೀತಿ ದೂರು ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಅವರು ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ನಮ್ಮ ಕುಟುಂಬಕ್ಕೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಮಾತ್ರ ಗೊತ್ತು.

ಅವರು ಕಷ್ಟಪಟ್ಟ ಸಿನಿಮಾವನ್ನು ನೋಡಲು ಅವರು ಇದೀಗ ಇಲ್ಲ. ಇದು ಸಿನಿಮಾವನ್ನು ಟಾರ್ಗೆಟ್ ಮಾಡಿ ಮಾಡಿದ ಷಡ್ಯಂತ್ರ. ಒಂದು ವೇಳೆ ಆ ರೀತಿ ಆಗಿದ್ದರೆ, ಈ ದೂರನ್ನು ಈ ಹಿಂದೆಯೇ ಕೊಡಬೇಕಿತ್ತಲ್ವಾ. ಸಿನಿಮಾ ರಿಲೀಸ್ ಹಿಂದಿನ ದಿನ ಯಾಕೆ ಕೊಡಬೇಕಿತ್ತು ಎಂದು ತನ್ನ ಪತಿಯ ಅನುಪಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ