ಕನ್ನಡದ ಖ್ಯಾತ ನಿರ್ದೇಶಕ ನಂದಕಿಶೋರ್ ಹೆಸರು ಬರೆದಿಟ್ಟು ಸಾಯುತ್ತೇನೆಂದ ಯುವ ನಟ

Sampriya

ಸೋಮವಾರ, 15 ಸೆಪ್ಟಂಬರ್ 2025 (18:26 IST)
Photo Credit X
ನಾನು ಸತ್ತರೆ ಅದಕ್ಕೆ ನಿರ್ದೇಶಕ ನಂದಕಿಶೋರ್‌ ಹಾಗೂ ಸಾರಾ ಗೋವಿಂದು ಅವರೇ ಕಾರಣ ಎಂದು ಕನ್ನಡದ ಯುವ ನಟ ಶಬರೀಶ್ ಶೆಟ್ಟಿ ಆಘಾತಕೋರಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ನಿರ್ದೇಶಕ ನಂದಕೀಶೋರ್ ಮೇಲೆ ವಂಚನೆ ಆರೋಪ ಮಾಡಿದ್ದ ಶಬರೀಶ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಿದ್ದರು. ಬಳಿಕ ಕರೆ ಮಾಡಿದ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ ಅವರು  ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದರು. 

ಸಾರಾ ಗೋವಿಂದು ಕೊಟ್ಟ ಸಮಯ ಮುಗಿದ ಬಳಿಕ ಶಬರೀಶ್ ಕರೆ ಮಾಡಿ ವಿಚಾರಿಸಿದಾಗ ಏನ್ ಬೇಕಾದ್ರೂ ಮಾಡಿಕೊಳ್ಳಿ ಎಂಬ ಉತ್ತರ ಬಂದಿದ್ದಕ್ಕೆ ನೊಂದ ಯುವನಟ ಇದೀಗ ವೀಡಿಯೋ ರೆಕಾರ್ಡ್ ಮಾಡಿ ನಡೆದಿರುವ ಘಟನೆ ವಿವರಿಸಿದ್ದಾರೆ. 

ಸಾರಾ ಗೋವಿಂದ್ ಮಾತು ಕೇಳಿ ಪೊಲೀಸರಿಗೆ ದೂರು ಕೊಡುವ ನಿರ್ಧಾರವನ್ನ ಕೈ ಬಿಟ್ಟಿದ್ದ ಅವರು, 2 ತಿಂಗಳಾದ್ರೂ ಸಂಧಾನ ಆಗದೇ ಇದ್ದಾಗ ಮತ್ತೆ ಸಾರಾ ಗೋವಿಂದ್‍ಗೆ ಕರೆ ಮಾಡಿದ್ದಾರೆ. 
ಈ ವೇಳೆ ನಿನ್ನ ಕೈಯಿಂದ ಏನ್ ಮಾಡೋಕೆ ಆಗತ್ತೋ ಮಾಡ್ಕೋ ಅಂದ್ರಂತೆ. ಇತ್ತ ಹಣವೂ ಬಾರದೇ, ಅತ್ತ ಸಂಧಾನವೂ ನಡೆಯದೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ