ಮೊದಲ ಸಂಭಾವನೆಯನ್ನು ಒಳ್ಳೆಯ ಕೆಲಸಕ್ಕೆ ಖರ್ಚು ಮಾಡಿದ ಮಹೇಶ್ ಬಾಬು ಪುತ್ರಿ ಸಿತಾರಾ

ಭಾನುವಾರ, 16 ಜುಲೈ 2023 (08:50 IST)
ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಇತ್ತೀಚೆಗೆ ಆಭರಣಗಳ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು.

ಅವರ ಫೋಟೋಗಳು ಟೈಮ್ಸ್ ಸ್ಕ್ವೇರ್ ನಲ್ಲೂ ಪ್ರದರ್ಶಿತಗೊಂಡಿದ್ದವು. ಈ ಜಾಹೀರಾತಿನಲ್ಲಿ ಅಭಿನಯಿಸಲು ಸಿತಾರಾ ಒಂದು ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು.

ಈ ಮೊದಲ ಸಂಭಾವನೆಯನ್ನು ಸಿತಾರಾ ಒಳ್ಳೆಯ ಕೆಲಸಕ್ಕೆ ವಿನಿಯೋಗಿಸಿದ್ದಾರಂತೆ. ಸಾಮಾಜಿಕ ಸೇವೆಯಲ್ಲಿ ತೊಡಗಸಿಕೊಂಡಿರುವ ಸಂಸ್ಥೆಯೊಂದಕ್ಕೆ ಸಿತಾರಾ ತಮ್ಮ ಮೊದಲ ಸಂಭಾವನೆಯನ್ನು ದೇಣಿಗೆಯಾಗಿ ನೀಡಿದ್ದಾರೆ. ಸಿತಾರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ