ವಿಜಯ್ ದೇವರಕೊಂಡ ತಮ್ಮನ ಸಿನಿಮಾ ನೋಡಿ ಭಾವುಕರಾದ ರಶ್ಮಿಕಾ ಮಂದಣ್ಣ

ಶುಕ್ರವಾರ, 14 ಜುಲೈ 2023 (16:23 IST)
Photo Courtesy: Twitter
ಹೈದರಾಬಾದ್: ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಾಯಕರಾಗಿರುವ ಬೇಬಿ ಸಿನಿಮಾ ರಿಲೀಸ್ ಆಗಿದ್ದು, ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿಶೇಷವೆಂದರೆ ರಶ್ಮಿಕಾ ಮಂದಣ್ಣ ಕೂಡಾ ಥಿಯೇಟರ್ ಗೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ. ಹೊರಗೆ ಬರುವಾಗ ಸಿನಿಮಾ ನೋಡಿ ಕಣ್ಣೀರು ಹಾಕುತ್ತಲೇ ಹೊರಬಂದ ರಶ್ಮಿಕಾ ಸಿನಿಮಾ ಸೂಪರ್ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ವಿಜಯ್ ಸಹೋದರ ಆನಂದ್ ಜೊತೆಗೂ ರಶ್ಮಿಕಾಗೆ ಉತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ರಶ್ಮಿಕಾ ಖುದ್ದಾಗಿ ಥಿಯೇಟರ್ ಗೆ ತೆರಳಿ ಸಿನಿಮಾ ನೋಡಿ ಸ್ನೇಹಿತನ ಸಿನಿಮಾಗೆ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ