ರಶ್ಮಿಕಾ ಮಂದಣ್ಣ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಕಾಂಪ್ಲಿಮೆಂಟ್

ಸೋಮವಾರ, 1 ಜೂನ್ 2020 (09:35 IST)
ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಚಿರಪರಿಚಿತರಾಗಿದ್ದಾರೆ. ಬೇಡಿಕೆಯ ಹೀರೋಯಿನ್ ಆಗಿರುವ ರಶ್ಮಿಕಾ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆಗೂ ತೆರೆ ಹಂಚಿಕೊಂಡಿದ್ದರು.


ನಿನ್ನೆ ಮಹೇಶ್ ಬಾಬು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ನಿಮಗೆ ಸಹ ನಟಿಯರಲ್ಲಿ ಸಮಂತಾ ಇಷ್ಟವಾ? ರಶ್ಮಿಕಾ ಮಂದಣ್ಣ ಹೆಚ್ಚು ಇಷ್ಟವಾ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಮಹೇಶ್ ಬಾಬು ‘ನನಗೆ ಇಬ್ಬರೂ ಇಷ್ಟ. ಇಬ್ಬರೂ ಅತ್ಯುತ್ತಮ ಸಹ ನಟಿಯರು’ ಎಂದು ಕಾಂಪ್ಲಿಮೆಂಟ್ ಮಾಡಿದ್ದಾರೆ. ಸ್ವತಃ ಮಹೇಶ್ ಬಾಬು ಕೈಯಲ್ಲಿ ಹೊಗಳಿಸಿಕೊಂಡಿದ್ದಕ್ಕೆ ರಶ್ಮಿಕಾನೂ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ