ಗುಂಟೂರು ಖಾರಂ ಈವೆಂಟ್ ನಲ್ಲಿ ಶ್ರೀಲೀಲಾರನ್ನು ಮಹೇಶ್ ಬಾಬು ಹೊಗಳಿದ್ದೇ ಹೊಗಳಿದ್ದು!
ಮಹೇಶ್ ಬಾಬು ಪಕ್ಕವೇ ಕಪ್ಪು ಸೀರೆಯುಟ್ಟು ಶ್ರೀಲೀಲಾ ಕೂತು ಕಾರ್ಯಕ್ರಮ ವೀಕ್ಷಿಸಿದ್ದಾರೆ. ಅವರಿಬ್ಬರೂ ಜೊತೆಯಾಗಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು, ವೇದಿಕೆಯಲ್ಲಿ ಮಹೇಶ್ ಬಾಬು ನಾಯಕಿ ಶ್ರೀಲೀಲಾರನ್ನು ಹಾಡಿಹೊಗಳಿದ್ದಾರೆ. ಶ್ರೀಲೀಲಾ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ಮತ್ತು ಕಠಿಣ ಪರಿಶ್ರಮ ಪಡುವ ನಾಯಕಿಯರಲ್ಲಿ ಒಬ್ಬರು ಎಂದು ಮಹೇಶ್ ಬಾಬು ಹಾಡಿ ಹೊಗಳಿದ್ದಾರೆ.
ಅವರ ಈ ಹೇಳಿಕೆಗೆ ಶ್ರೀಲೀಲಾ ಧನ್ಯವಾದ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಶ್ರೀಲೀಲಾ ಈಗ ತೆಲುಗಿನಲ್ಲಿ ಬಿಗ್ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸುತ್ತಿರುವುದು ವಿಶೇಷ. ಗುಂಟೂರು ಖಾರಂ ಅವರ ಮತ್ತೊಂದು ತೆಲುಗು ಸಿನಿಮಾವಾಗಿದ್ದು ಜನವರಿ 12 ರಂದು ಈ ಸಿನಿಮಾ ತೆರೆ ಕಾಣುತ್ತಿದೆ.