ಸ್ಯಾಂಡಲ್ ವುಡ್ ಗೆ ವಾಪಸ್ ಆಗಲಿದ್ದಾರೆ ನಟಿ ಶ್ರೀಲೀಲಾ

ಶನಿವಾರ, 18 ನವೆಂಬರ್ 2023 (09:30 IST)
ಬೆಂಗಳೂರು: ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಕನ್ನಡತಿ ಶ್ರೀಲೀಲಾ ಮುಂದೆ ಕನ್ನಡ ಸಿನಿಮಾ ಮಾಡಲ್ವಾ ಎಂಬ ಸಿನಿ ರಸಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಶ್ರೀಲೀಲಾ ಈ ಬಗ್ಗೆ ಖುದ್ದಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಸದ್ಯದಲ್ಲೇ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

ಟಾಲಿವುಡ್ ನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ರಂತಹ ಘಟಾನುಘಟಿಗಳಿಗೆ ನಾಯಕಿಯಾಗಿರುವ ಶ್ರೀಲೀಲಾ ಈಗ ಬಹುಬೇಡಿಕೆಯ ನಟಿ. ಸಂಭಾವನೆ ವಿಚಾರದಲ್ಲೂ 4-5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೀಗ ಕನ್ನಡ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಸದ್ಯದಲ್ಲೇ ಈ ವಿಚಾರವನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟಿದ್ದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದರು. ಅಲ್ಲಿ ಈಗ ಕನ್ನಡದವರೇ ಆದ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆಯಂತಹ ಸ್ಟಾರ್ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ