ವಿಶ್ವಾದ್ಯಂತ ಬಾಲಿವುಡ್ ನಟನ ಮೈದಾನ್

ಶನಿವಾರ, 12 ಡಿಸೆಂಬರ್ 2020 (16:12 IST)
ಬಾಲಿವುಡ್ ನಟರೊಬ್ಬರುವ ವಿಶ್ವಾದ್ಯಂತ ತಮ್ಮ ಹೊಸ ಮೈದಾನ್ ತೋರಿಸಲು ಹೊರಟಿದ್ದಾರೆ.

2021 ರ ಅಕ್ಟೋಬರ್ 15 ರಂದು ದಸರಾ ಸಂದರ್ಭದಲ್ಲಿ ತಮ್ಮ ಮುಂಬರುವ ಚಿತ್ರ 'ಮೈದಾನ್' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಅಜಯ್ ದೇವ್‌ಗನ್ ಪ್ರಕಟಿಸಿದ್ದಾರೆ.

1950 ರಿಂದ 1963 ರಲ್ಲಿ ಸಾಯುವವರೆಗೂ ಫುಟ್ಬಾಲ್ ತರಬೇತುದಾರ ಮತ್ತು ಭಾರತೀಯ ರಾಷ್ಟ್ರೀಯ ತಂಡದ ವ್ಯವಸ್ಥಾಪಕರಾಗಿದ್ದ ಸೈಯದ್ ಅಬ್ದುಲ್ ರಹೀಂ ಅವರ ನೈಜ ಕಥೆಯಿಂದ ಈ ಚಿತ್ರ ಸ್ಫೂರ್ತಿ ಪಡೆದಿದೆ.

"ಮೈದಾನ್" ಈಗ ವಿಶ್ವಾದ್ಯಂತ ದಸರಾ 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂದಿದ್ದಾರೆ.  
ಈಗಾಗಲೇ ಶೇ. 65 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಜನವರಿ 2021 ರಲ್ಲಿ ಉಳಿದ ಚಿತ್ರೀಕರಣ ಪುನರಾರಂಭವಾಗಲಿದೆ. ಈಗಾಗಲೇ ಲಕ್ನೋ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ಚಿತ್ರೀಕರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ