ವೈಯಕ್ತಿಕ ಶತೃತ್ವ ಅಥವಾ ಬೇರಾವುದೋ ವಿಷಯಕ್ಕಾಗಲಿ ಯಾರ ಮೇಲೂ ವಿನಾಕಾರಣ ನಾನು ಆರೋಪ ಮಾಡಿಲ್ಲ, ನಾನು ಯಾರ ಹೆಸರನ್ನೂ ಎಲ್ಲಿಯೂ ಹೇಳಿಲ್ಲ ಎಂದು ನಟ ದಿಲೀಪ್ ಬಂಧನದ ಬಗ್ಗೆ ಕಿರುಕುಳಕ್ಕೊಳಗಾದ ಮಲೆಯಾಳಿ ನಟಿ ಮಾಧ್ಯಮಗಳಿಗೆ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಾಧ್ಯಮಗಳ ವರದಿಯಿಂದ ದಿಲೀಪ್ ಬಂಧನಕ್ಕೆ ಬಗ್ಗೆ ತಿಳಿಯಿತು. ಪ್ರಕರಣದಲ್ಲಿ ಅವರ ಸಂಚಿರುವ ಬಗ್ಗೆ ಗೊತ್ತಾಯಿತು. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ ಎಂದು ದಿಲೀಪ್ ಹೇಳಿದ್ದಾರೆ. ಅದು ನಿಜವಾದರೆ ಬೇಗ ಬಿಡುಗಡೆಯಾಗಲಿ, ಸತ್ಯ ಹೊರಬರಲಿ ಎಂದು ನಟಿ ಹೇಳಿದ್ದಾರೆ.
ಕೆಲ ವೈಯಕ್ತಿಕ ಕಾರಣಗಳಿಂದಾಗಿ ತನ್ನ ಮತ್ತು ದಿಲೀಪ್ ನಡುವಿನ ಸಂಬಂಧ ಹಾಳಾಗಿರುವುದನ್ನ ಒಪ್ಪಿಕೊಂಡಿರುವ ನಟಿ, ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದಿದ್ದಾರೆ.
ಒಂದು ಸಮಯದಲ್ಲಿ ದಿಲೀಪ್ ಜೊತೆಗಿನ ಲೀಡಿಂಗ್ ನಟಿಯಾಗಿದ್ದ ನಟಿ, ಮೊದಲ ಹೆಂಡತಿ ಮಂಜು ವಾರಿಯರ್ ಜೊತೆಗೆ ಕ್ಲೋಸ್ ಫ್ರೆಡ್ ಶಿಪ್ ಹೊಂದಿದ್ದರು. ಅದೇ ಸಂದರ್ಭ ದಿಲೀಪ್, ನಟಿ ಕಾವ್ಯಾ ಮಾಧವನ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬಗ್ಗೆ ಪತ್ನಿಗೆ ತಿಳಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದಿಲೀಪ್ ಸೇಡು ತೀರಿಸಿಕೊಳ್ಳಲು ದುಷ್ಕೃತ್ಯ ಎಸಗಿರಬಹುದು ಎಂದು ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ