ಮನೋರಂಜನ್ ರವಿಚಂದ್ರನ್ ‘ಆರಂಭ’ಕ್ಕೆ ಡಿ ಬಾಸ್ ದರ್ಶನ್ ಟೀಸರ್
ಶುಕ್ರವಾರ, 23 ಆಗಸ್ಟ್ 2019 (09:43 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಆರಂಭ ಸಿನಿಮಾದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿರುವುದು ನಿಮಗೆಲ್ಲಾ ಗೊತ್ತಿರುತ್ತದೆ.
ಆ ಟೀಸರ್ ನಲ್ಲಿ ದರ್ಶನ್ ಏನು ಹೇಳಿದ್ದಾರೆ? ದರ್ಶನ್ ಹಿನ್ನಲೆ ಧ್ವನಿ ಹೇಗಿದೆ ಎಂದು ಇಂದು ಗೊತ್ತಾಗಲಿದೆ. ಅಂದರೆ ಇಂದು ದರ್ಶನ್ ಧ್ವನಿ ನೀಡಿರುವ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ.
ಸಹಜವಾಗಿಯೇ ಟೀಸರ್ ನಲ್ಲಿ ಡಿ ಬಾಸ್ ಧ್ವನಿ ಇರುವುದಕ್ಕೆ ಇದನ್ನು ನೋಡಲು ಡಿ ಬಾಸ್ ಅಭಿಮಾನಿಗಳೂ ಕಾಯುತ್ತಿದ್ದಾರೆ. ಇಂದು ಸಂಜೆ 6.10 ಕ್ಕೆ ಟೀಸರ್ ಬಿಡುಗಡೆಯಾಗಲಿದೆ.