ಫಿಲಿಪ್ಪೀನ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಶೆರಿ ಸಿಂಗ್: ಭಾರತದ ಬ್ಯೂಟಿಗೆ ಮಿಸೆಸ್‌ ಯೂನಿವರ್ಸ್ ಕಿರೀಟ

Sampriya

ಭಾನುವಾರ, 12 ಅಕ್ಟೋಬರ್ 2025 (11:20 IST)
Photo Courtesy X
ವಾಷಿಂಗ್ಟನ್: ಭಾರತದ ಚೆಲುವೆ ಶೆರಿ ಸಿಂಗ್‌ ಅವರಿಗೆ ಮಿಸೆಸ್‌ ಯೂನಿವರ್ಸ್ ಕಿರೀಟ ಒಲಿದಿದೆ. ಭಾರತಕ್ಕೆ ಇದೇ ಮೊದಲ ಬಾರಿ ಈ ಗೌರವ ದೊರಕಿರುವುದು ವಿಶೇಷ.

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ 48ನೇ ಆವೃತ್ತಿಯ ಮಿಸೆಸ್‌ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಶೆರಿ ಸಿಂಗ್‌ ವಿಜೇತರಾಗಿದ್ದಾರೆ. 120 ಸ್ಪರ್ಧಿಗಳು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ ಸೇಂಟ್‌ ಪೀಟರ್ಸ್‌ಬರ್ಗ್‌ನ ಸ್ಪರ್ಧಿ ಮೊದಲ ರನ್ನರ್‌ ಅಪ್‌, ಫಿಲಿಪ್ಪೀನ್ಸ್‌ನ ಸ್ಪರ್ಧಿ 2ನೇ ರನ್ನರ್‌ ಅಪ್‌ ಆಗಿದ್ದಾರೆ.

ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶೆರಿ, ತನ್ನ ಮಿತಿಯಿಂದ ಹೊರಗೆ ಕನಸು ಕಾಣುವ ಧೈರ್ಯ ಮಾಡುವ ಎಲ್ಲ ಮಹಿಳೆಗೂ ಈ ಗೆಲುವು ಸಲ್ಲುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸ್ಪರ್ಧಿ ಶೆರಿ ಸಿಂಗ್ ಆಗಿದ್ದಾರೆ. ಇತರ ಅಂತಿಮ ಸ್ಪರ್ಧಿಗಳು ಯುಎಸ್ಎ, ಜಪಾನ್, ಮ್ಯಾನ್ಮಾರ್, ಬಲ್ಗೇರಿಯಾ, ಯುಎಇ, ಆಫ್ರಿಕಾ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ