ಪೈಲ್ವಾನ್ ಸುದೀಪ್ ಗೆ ಅಭಿಮಾನಿಗಳಿಂದ ಭಾರೀ ಡಿಮ್ಯಾಂಡ್

ಭಾನುವಾರ, 19 ಜನವರಿ 2020 (19:58 IST)

ಪೈಲ್ವಾನ್, ನಟ ಕಿಚ್ಚ ಸುದೀಪ್ ಗೆ ಇದೀಗ ಅಭಿಮಾನಿಗಳು ಭಾರೀ ಡಿಮ್ಯಾಂಡ್ ಮಾಡತೊಡಗಿದ್ದಾರೆ.
 

ಈ ಕುರಿತು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕಿಚ್ಚನಿಗೆ ರಿಕ್ವೆಸ್ಟ್ ಮಾಡಿಕೊಳ್ತಿದ್ದಾರೆ. ಯಾವುದೇ ಕಾರಣಕ್ಕೂ ನೀವು ವಿಲನ್ ಪಾತ್ರ ಮಾಡಬೇಡಿ. ನೀವು ಬೇರೆ ಭಾಷೆಗಳಲ್ಲಿ ಸೈಡ್ ಆ್ಯಕ್ಟರ್ ಆಗಿರಬೇಡಿ ಅಂತೆಲ್ಲ ಮನವಿ ಮಾಡ್ತಿದ್ದಾರೆ.

ಕಿಚ್ಚ ಸುದೀಪ್ ದಬಾಂಗ್ 3 ನಲ್ಲಿ ವಿಲನ್ ರೋಲ್ ಮಾಡಿದ್ರು. ಇದೀಗ ಟಾಲಿವುಡ್ ನಿಂದ ಆಫರ್ ಬಂದಿದೆ ಎನ್ನಲಾಗುತ್ತಿದೆ.

ಹೀಗಾಗಿ ಕನ್ನಡದಲ್ಲೇ ಹೆಚ್ಚು ಸಿನಿಮಾ ಮಾಡಿ, ಬಾಲಿವುಡ್, ಹಾಲಿವುಡ್ ಮಾಡಿ ನಾವು ಕಾಲರ್ ಎತ್ತುವಂತೆ ಮಾಡಿ. ಆದರೆ ವಿಲನ್ ಪಾತ್ರ ಮಾಡಬೇಡಿ ಅಂತ ಅಭಿಮಾನಿಗಳು ಕಿಚ್ಚನಿಗೆ ಡಿಮ್ಯಾಂಡ್ ಮಾಡ್ತಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ