ಪುನೀತ್ ರಾಜ್ ಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಟೀಸರ್ ಕತಾರ್ ನಲ್ಲಿ ಬಿಡುಗಡೆ
ಈ ಸಿನಿಮಾದ ಟೀಸರ್ ನವಂಬರ್ 15 ರಂದು ಕತಾರ್ ನ ಕನ್ನಡ ಸಂಘದಲ್ಲಿ ಸ್ವತಃ ಪುನೀತ್ ರಾಜ್ ಕುಮಾರ್ ಅವರಿಂದಲೇ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಈ ಮೊದಲೇ ಪುನೀತ್ ಹೇಳಿಕೊಂಡಿದ್ದರು. ಕವಲು ದಾರಿ ಬಳಿಕ ಇದು ಪುನೀತ್ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾವಾಗಿದೆ.