ಡಿಫರೆಂಟ್ ಆಗಿ ಬಿಡುಗಡೆಯಾಗಲಿದೆ ಬ್ರಹ್ಮಚಾರಿ ಹಾಡು

ಗುರುವಾರ, 14 ನವೆಂಬರ್ 2019 (09:20 IST)
ಬೆಂಗಳೂರು: ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ಬ್ರಹ್ಮಚಾರಿ ಸಿನಿಮಾ ತಂಡ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಇದುವರೆಗೆ ಯಾರೂ ಮಾಡದ ಸಾಹಸಕ್ಕೆ ಕೈ ಹಾಕುತ್ತಿದೆ.


ಸಾಮಾನ್ಯವಾಗಿ ಒಂದು ಸಿನಿಮಾದ ಹಾಡು ಯೂ ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗುತ್ತದೆ. ಆದರೆ ಬ್ರಹ್ಮಚಾರಿ ತಂಡ ತಮ್ಮ ಸಿನಿಮಾ ಹಾಡೊಂದನ್ನು ಲೈವ್ ಆಗಿ ಪರ್ಫಾರ್ಮೆನ್ಸ್ ಮಾಡುವ ಮೂಲಕ ಬಿಡುಗಡೆ ಮಾಡುತ್ತಿದೆ.

ಬ್ರಹ್ಮಚಾರಿ ಚಿತ್ರದ ಎರಡನೇ ಹಾಡನ್ನು ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ನಲ್ಲಿ ಲೈವ್ ಆಗಿ ನವಂಬರ್ 15 ರಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ರಾವ್ ಲೈವ್ ಆಗಿ ಹಾಡು ಹಾಡುವ ಮೂಲಕ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ