ಮೈಸೂರಿನಲ್ಲಿ ಸೀರಿಯಲ್ ನಾಯಕಿ ಮೇಘಾ ಶೆಟ್ಟಿ ಜತೆ ಶೈನ್ ಶೆಟ್ಟಿ ಹೋಳಿ ಸಂಭ್ರಮ

ಮಂಗಳವಾರ, 10 ಮಾರ್ಚ್ 2020 (09:59 IST)
ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ನಡೆದ ರಂಗ್ ದೇ ಮೈಸೂರು 2020 ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಜೊತೆ ಜೊತೆಯಲಿ ಧಾರವಾಹಿ ನಾಯಕಿ ಮೇಘಾ ಶೆಟ್ಟಿ ಬಣ್ಣದ ಓಕುಳಿ ಆಡಿ ಸಂಭ್ರಮಿಸಿದ್ದಾರೆ.


ಅಭಿಮಾನಿಗಳ ಜತೆ ಹೋಳಿ ಆಚರಿಸಿದ ಸೆಲೆಬ್ರಿಟಿಗಳು ಬಳಿಕ ಎಲ್ಲರಿಗೂ ಶುಭಾಷಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಬಣ್ಣ ಹಚ್ಚಿದ ಅಭಿಮಾನಿಗಳು ಬಳಿಕ ಸೆಲ್ಫೀ ತೆಗೆಸಿಕೊಂಡು ಸಂಭ್ರಮಿಸಿದರು.

ಇನ್ನು ಹೋಳಿ ಹಬ್ಬದ ಪ್ರಯುಕ್ತ ಹಲವು ಸಿನಿಮಾ, ಕ್ರಿಕೆಟ್ ಕ್ಷೇತ್ರದ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಶುಭಾಷಯ ಕೋರಿದ್ದಾರೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಕೊರೊನಾ ಭೀತಿಯಿಂದಾಗಿ ಈ ಬಾರಿ ಬಣ್ಣದ ಓಕುಳಿ ಆಡಲು ಜನ ಹಿಂಜರಿಯುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ