ಹೋಳಿ ಹಬ್ಬದಲ್ಲಿ ಮಹಿಳೆಯರು ಈ ವಿಚಾರವನ್ನು ಮರೆಯಬೇಡಿ!

ಮಂಗಳವಾರ, 10 ಮಾರ್ಚ್ 2020 (09:47 IST)
ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಗುಂಪಿನಲ್ಲಿ ಬಣ್ಣದ ಓಕುಳಿ ಆಡುವಾಗ ಆ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸುವವರಿರುತ್ತಾರೆ! ಹೀಗಾಗಿ ಬಣ‍್ಣದ ಹಬ್ಬ ಆಡುವಾಗ ಮಹಿಳೆಯರು ಮೈಮರೆಯಬೇಡಿ!


ಬಣ್ಣದ ಓಕುಳಿ ಎರಚುವಾಗ ಯಾರೇ ಅಪರಿಚಿತರು ಮೈ ಮೇಲೆ ಬೀಳುವುದು, ಅನುಚಿತವಾಗಿ ಸ್ಪರ್ಶಿಸುವುದು ಇತ್ಯಾದಿ ಮಾಡಿದರೆ ತಕ್ಷಣವೇ ಅದನ್ನು ವಿರೋಧಿಸಿ. ಹಬ್ಬದ ಸಂದರ್ಭದಲ್ಲಿ ಹೀಗೆಲ್ಲಾ ಆಗುವುದು ಸಾಮಾನ್ಯ ಎಂದು ಸುಮ್ಮನಾಗಬೇಡಿ.

ಎಷ್ಟೋ ಸಂದರ್ಭದಲ್ಲಿ ಈ ರೀತಿಯ ಸಾಮೂಹಿಕ ಆಚರಣೆ ವೇಳೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯವಾದ ಘಟನೆಗಳು ನಡೆದ ಉದಾಹರಣೆಗಳಿವೆ. ಹೀಗಾಗಿ ಎಚ್ಚರಿಕೆಯಿಂದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ