ಡ್ರಗ್ ಮಾಫಿಯಾ: ಚಿರು ಸರ್ಜಾ ಹೆಸರು ಬಳಸಿದ್ದಕ್ಕೆ ಮೇಘನಾ ಬೇಸರ
ಭಾನುವಾರ, 30 ಆಗಸ್ಟ್ 2020 (13:05 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ವಿಚಾರದಲ್ಲಿ ಇತ್ತೀಚೆಗಷ್ಟೇ ನಿಧನರಾದ ಚಿರು ಸರ್ಜಾ ಹೆಸರು ಬಳಸಿದ್ದಕ್ಕೆ ಪತ್ನಿ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಚಿರು ಹೆಸರು ಯಾಕೆ ಬಳಸುತ್ತಿದ್ದೀರಿ? ಚಿರು ಇಲ್ಲದೇ ನಾವು ನೋವಿನಲ್ಲಿದ್ದೇವೆ. ಅದರ ಮೇಲೆ ಇಂತಹ ಆರೋಪ ಮಾಡಿ ಯಾಕೆ ನೋವು ಕೊಡುತ್ತೀರಿ ಎಂದು ಮೇಘನಾ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಅತ್ತ ಧ್ರುವ ಸರ್ಜಾ ಕೂಡಾ ಅಣ್ಣನ ಹೆಸರು ಬಳಕೆ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.