ಅಮ್ಮನ ಬರ್ತ್ ಡೇಗಾಗಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮಾಡಿದ ರಿಕ್ವೆಸ್ಟ್

ಭಾನುವಾರ, 30 ಆಗಸ್ಟ್ 2020 (11:23 IST)
ಬೆಂಗಳೂರು: ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಬರ್ತ್ ಡೇ ಇದ್ದು, ಇದಕ್ಕಾಗಿ ಅಭಿಮಾನಿಗಳು ಸಿಡಿಪಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಇದಕ್ಕೂ ಮೊದಲು ಕಿಚ್ಚ ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ.


ಸುದೀಪ್ ಬರ್ತ್ ಡೇಗೆ ಅವರ ಅಭಿಮಾನಿಗಳು ಇಂದೇ ವಿಶೇಷ ಸಿಡಿಪಿ ಬಿಡುಗಡೆ ಮಾಡುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಇದಕ್ಕೆ ಅವರೇ ಬ್ರೇಕ್ ಹಾಕಿದ್ದಾರೆ. ಇಂದು ನನ್ನ ಅಮ್ಮನ ಬರ್ತ್ ಡೇ. ಈವತ್ತು ನಮಗಿಬ್ಬರಿಗೂ ಸ್ಪೆಷಲ್. ಈವತ್ತು ಸಿಡಿಪಿ ಬಿಡುಗಡೆ ಎಲ್ಲಾ ಬೇಡ. ಮುಂದಕ್ಕೆ ಹಾಕಿ ಎಂದು ಕಿಚ್ಚ ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ