ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ತಡೆಗಟ್ಟಲು ಇಂದ್ರಜಿತ್ ಲಂಕೇಶ್ ಸಹಾಯ
ಭಾನುವಾರ, 30 ಆಗಸ್ಟ್ 2020 (09:46 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಟ-ನಟಿಯರು ಡ್ರಗ್ ಸೇವನೆ ಮಾಡುತ್ತಾರೆ ಎಂದು ಆರೋಪ ಮಾಡಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ರ ನೆರವಿನಿಂದ ಡ್ರಗ್ ಮಾಫಿಯಾ ಬಗ್ಗುಬಡಿಯಲು ಪ್ರಯತ್ನಿಸುವುದಾಗಿ ಸಚಿವ ಸಿಟಿ ರವಿ ಹೇಳಿದ್ದಾರೆ.
ಇಂದ್ರಜಿತ್ ಇಂತಹದ್ದೊಂದು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಅವರಿಗೆ ಭದ್ರತೆ ನೀಡಲು ಸಿದ್ಧ ಎಂದು ಸರ್ಕಾರ ಹೇಳಿತ್ತು. ಇದೀಗ ಅವರು ಸಹಕಾರ ನೀಡಿದರೆ ಮಾಫಿಯಾ ತಡೆಗಟ್ಟಬಹುದು ಎಂದು ಸಚಿವರು ಹೇಳಿದ್ದಾರೆ. ದಂಧೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಎಲ್ಲಿಂದ ಪೂರೈಕೆಯಾಗುತ್ತಿದೆ ಇತ್ಯಾದಿ ವಿವರಗಳನ್ನು ತಿಳಿಯಲು ಇಂದ್ರಜಿತ್ ಸಹಕಾರ ಅಗತ್ಯ ಎಂದು ಅವರು ಹೇಳಿದ್ದಾರೆ.