ಪತಿ ಚಿರು ಸರ್ಜಾಗಾಗಿ ಹಾಡಿದ ಮೇಘನಾ ರಾಜ್

ಶುಕ್ರವಾರ, 5 ಏಪ್ರಿಲ್ 2019 (09:23 IST)
ಬೆಂಗಳೂರು: ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆಯಾದ ಮೇಲೆ ಒಂದೇ ಸಿನಿಮಾಗೆ ಕೆಲಸ ಮಾಡಿದ್ದಿಲ್ಲ. ಆದರೆ ಈಗ ಪತಿಗೆ ಜತೆಯಾಗಿ ನಿಂತಿದ್ದಾರೆ ಮೇಘನಾ.


ಚಿರು ಸರ್ಜಾ ಅಭಿನಯದ ‘ಸಿಂಗ’ ಸಿನಿಮಾದಲ್ಲಿ ಮೇಘನಾ ಹಾಡೊಂದನ್ನು ಹಾಡಿದ್ದಾರೆ. ಮೇಘನಾಗೆ ಹಾಡೋದು ಎಂದರೆ ಇಷ್ಟವಂತೆ. ಹೀಗಾಗಿ ಅವರ ಪ್ರತಿಭೆಯನ್ನು ಗಮನಿಸಿ ನಿರ್ದೇಶಕರು ಈ ಅವಕಾಶ ಮಾಡಿಕೊಟ್ಟಿದ್ದಾರೆ.

ಅಂದ ಹಾಗೆ ಪತ್ನಿ ತನ್ನ ಸಿನಿಮಾದಲ್ಲಿ ಹಾಡಿರುವುದಕ್ಕೆ ಚಿರು ಕೂಡಾ ಖುಷಿಯಾಗಿದ್ದಾರೆ. ಈ ಹಾಡು ನಾಳೆ ಅಂದರೆ ಯುಗಾದಿ ದಿನ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ