ಅಣ್ಣಾವ್ರ ಕುಟುಂಬದ ಜತೆಗಿನ ಸವಿನೆನಪು ಹಂಚಿಕೊಂಡ ಸಚಿವ ಜಮೀರ್ ಅಹ್ಮದ್

Sampriya

ಶನಿವಾರ, 28 ಸೆಪ್ಟಂಬರ್ 2024 (16:01 IST)
Photo Courtesy X
ಬೆಂಗಳೂರು: ರಾಜ್‌ಕುಮಾರ್ ಕುಟುಂಬ ಹಾಗೂ ಸಚಿವ ಜಮೀರ್ ಅಹ್ಮದ್ ಅವರು ಬಹಳ ಆತ್ಮೀಯತೆಯನ್ನು ಹೊಂದಿದ್ದಾರೆ. ಅದರ ಸವಿನೆನಪಿನಲ್ಲಿ ಈ ಹಿಂದೆ ರಾಜ್‌ಕುಮಾರ್ ಕುಟುಂಬದ ಜತೆ ಕಳೆದ ಕ್ಷಣಗಳ ಪೋಟೋವನ್ನು ಸಚಿವ ಜಮೀರ್ ಅಹ್ಮದ್ ಅವರು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ  ಅವರು ಡಾ. ರಾಜ್‌ಕುಮಾರ್ ಅವರು ಕುಟುಂಬಕ್ಕೆ ಔತಣಕೂಟ ಏರ್ಪಡಿಸಿದ್ದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಜಮೀರ್ ಅವರೇ ಅಣ್ಣಾವ್ರಿಗೆ ಊಟ ಬಡಿಸುತ್ತಿರುವುದನ್ನು ಕಾಣಬಹುದು.  ಅಣ್ಣಾವ್ರ ಜತೆಗೆ ಪುನೀರ್‌ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕೂಡಾ ಇದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜರಾದ ದಿವಂಗತ ಡಾ.ರಾಜ್‌ಕುಮಾರ್ ಜಿ ಮತ್ತು ದಿವಂಗತ ಶ್ರೀ.ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಗಳು ಎಂದು ಬರೆದುಕೊಂಡು ಎರಡು ಫೋಟೋವನ್ನು ಟ್ವೀಟ್​ ಮಾಡಿದ್ದಾರೆ.

ಈ ಫೋಟೋ ಸಖತ್​ ವೈರಲ್​​ ಆಗಿದೆ. ಯಾವ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದು ತಿಳಿದಿಲ್ಲ. ಯಾವ ಫಂಕ್ಷನ್, ಸಂದರ್ಭಯಾವುದು ಎಂಬುದನ್ನು ಜಮೀರ್ ಬಹಿರಂಗಪಡಿಸಿಲ್ಲ. ಇಂದು ಮದ್ಯಾಹ್ನ 12 ಗಂಟೆಗೆ ಪೋಸ್ಟ್ ಮಾಡಿರುವ ಈ ಫೋಟೋ ಇಲ್ಲಿವರೆಗೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ  ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ