ಮೋಹನ್ ಲಾಲ್ ಗೆ 60 ನೇ ಹುಟ್ಟುಹಬ್ಬ: ಸೂಪರ್ ಸ್ಟಾರ್ ಅಭಿನಯಿಸಿದ ಕನ್ನಡ ಸಿನಿಮಾಗಳು ಯಾವುವು ಗೊತ್ತಾ?

ಗುರುವಾರ, 21 ಮೇ 2020 (10:31 IST)
ಬೆಂಗಳೂರು: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅಲಿಯಾಸ್ ಲಾಲೇಟ್ಟನ್ ಗೆ ಇಂದು 60 ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.


ರಾಷ್ಟ್ರಪ್ರಶಸ್ತಿ ವಿಜೇತ ನಟ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ, ಹಿಂದಿಯಲ್ಲೂ ಅಭಿನಯಿಸಿ ಅಪಾರ ಅಭಿಮಾನಿ ವರ್ಗದವರನ್ನು ಹೊಂದಿದ್ದಾರೆ.

ಕನ್ನಡದಲ್ಲಿ ಮೋಹನ್ ಲಾಲ್ ಮೊದಲ ಬಾರಿಗೆ ಅಭಿನಯಿಸಿದ್ದು ಆದಿತ್ಯ-ರಕ್ಷಿತಾ ಅಭಿನಯದ ‘ಲವ್’ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅವರು ಒಂದು ರೀತಿಯಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಮತ್ತೆ ಅವರು ಅಭಿನಯಿಸಿದ್ದು ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ ‘ಮೈತ್ರಿ’ ಸಿನಿಮಾದಲ್ಲಿ. ಈ ಸಿನಿಮಾದಲ್ಲೂ ಅವರು ದ್ವಿತೀಯಾರ್ಧದಲ್ಲಿ ಬರುತ್ತಾರೆ. ವಿಜ್ಞಾನಿಯಾಗಿರುವ ಅವರು ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಬರುವ ಅಪ್ಪನಾಗಿ ಕಾಣಿಸಿಕೊಳ್ಳುತ್ತಾರೆ. ಇವೆರಡೂ ಸಿನಿಮಾದಲ್ಲಿ ಅವರು ತಮ್ಮದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡಿರುವುದು ವಿಶೇಷ. ಈ ದಿಗ್ಗಜ ನಟನಿಗೆ ನಮ್ಮ ಕಡೆಯಿಂದ ಒಂದು ಹ್ಯಾಪೀ ಬರ್ತ್ ಡೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ