ಎರಡನೇ ಹಾಡಿನ ರಿಲೀಸ್ ಗೆ ರೆಡಿಯಾದ ಕೋಟಿಗೊಬ್ಬ 3

ಬುಧವಾರ, 20 ಮೇ 2020 (09:02 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಎರಡನೇ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಬಗ್ಗೆ ಆನಂದ್ ಅಡಿಯೋ ಸುಳಿವು ನೀಡಿದೆ.


ಕೋಟಿಗೊಬ್ಬ 3 ಸಿನಿಮಾದ ಮೊದಲ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ ಪಡೆದಿತ್ತು. ಈ ಹಾಡು ದಾಖಲೆ ಮಾಡಿದ ಬೆನ್ನಲ್ಲೇ ಈಗ ಎರಡನೆ ಹಾಡಿನ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿದೆ.

ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಸದ್ಯದಲ್ಲೇ ಹಾಡು ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ