ಯುವಪಡೆಗಳು ಸೇರಿಕೊಂಡು ನಿರ್ಮಿಸಿರುವ ಚಿತ್ರವೇ 'ಮೌನಂ' ಸಿನಿಮಾ. ನಾನಾ ವಿಶೇಷತೆಗಳನ್ನೊಳಗೊಂಡ ರಾಜ್ ಪಂಡಿತ್ ನಿರ್ದೇಶನದ 'ಮೌನಂ' ಇದೆ 21 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ಸೆಟ್ಟೇರಿದಾಗಿಂದ ಸದ್ದು ಮಾಡುತ್ತಲೇ ಇದೆ. ಸಾಕಷ್ಟು ವಿಶೇಷತೆಗಳನ್ನ ಸಿನಿಮಾ ಹೊಂದಿರುವುದೇ ಅದಕ್ಕೆ ಕಾರಣವಾಗಿದೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬಾಲಾಜಿ ಶರ್ಮರಿಗೆ ನಾಯಕಿಯಾಗಿ ಮಯೂರಿ ನಟಿಸಿದ್ದಾರೆ. ಹಿರಿಯ ನಟ ಅವಿನಾಶ್ ಇಡೀ ಕಥೆಯನ್ನು ಲೀಡ್ ಮಾಡುವಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ ಪಾತ್ರಗಳೇ ವಿಶೇಷ.
ನೋಎಇದ ಸಿನಿಮಾಗಳಲ್ಲಿ ನಾಯಕ/ನಾಯಕಿಯದ್ದು ಒಂದು ಅಥವಾ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಬಹುದು. ಆದ್ರೆ ಈ ಸಿನಿಮಾದಲ್ಲಿ ಕೇವಲ ನಾಯಕ, ನಾಯಕಿ ಅಲ್ಲ ಮುಖ್ಯಪಾತ್ರಧಾರಿಗಳು ಹಲವು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮಯೂರಿ 2 ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೆ, ನಾಯಕ ನಟ ಬಾಲಾಜಿ ಶರ್ಮಾ 3/4 ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮುಖ ಪಾತ್ರಧಾರಿ ನಟ ಅವಿನಾಶ್ 6 ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್ 'ಮೌನಂ' ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ.
ಇದೊಂದು ಸ್ಪೆಷಲ್ ಸಿನಿಮಾ. ಅಪರೂಪದ ಕತೆ ಮಾತ್ರವಲ್ಲ ಎಲ್ಲರ ಮನಸ್ಸಿನಲ್ಲಿ ಉಳಿಯುವ ಚಿತ್ರ ಎನ್ನುವ ನಿರ್ದೇಶಕ ರಾಜ್ ಪಂಡಿತ್, ಈ ಹಿಂದೆ 'ದೇವರಿಗೆ ಪಾಠ' ಎನ್ನುವ ಕಿರುಚಿತ್ರವನ್ನ ಮಾಡಿದ್ರು. ಸುಮಾರು 100 ಜನಕ್ಕಿಂತ ಹೆಚ್ಚಿನವರು ಆತ್ಮಹತ್ಯೆಯಿಂದ ಪಾರು ಮಾಡಿದ ಕೀರ್ತಿ ಆ ಕಿರುಚಿತ್ರಕ್ಕಿದೆಯಂತೆ. ಹೀಗೆ ಪರಿಣಾಮಕಾರಿಯಾಗಿ ಚಿತ್ರ ಮಾಡುವ ಶಕ್ತಿ ರಾಜ್ ಪಂಡಿತ್ ಅವರಿಗಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಇದೀಗ ಡಿಫ್ರೆಂಟ್ ಕಾನ್ಸೆಪ್ಟ್ ನೊಂದಿಗೆ ತಯಾರಾಗಿರುವ 'ಮೌನಂ' ಕೂಡ ಅಷ್ಟೇ ನಿರೀಕ್ಷೆಯನ್ನ ಹುಟ್ಟಿಸಿದೆ.
ನಿಹಾರಿಕ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಅವಿನಾಶ್, ಬಾಲಾಜಿ ಶರ್ಮಾ, ಮಯೂರಿ, ರಿತೇಶ್, ನಯನಾ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಇದೇ 21ಕ್ಕೆ ಸಿನಿಮಾ ತೆರೆಗ ಬರಲಿದೆ.