ಮದರಾಸಿ ಚಿತ್ರ ಬಿಡುಗಡೆಗೆ ಡೇಟ್‌ ಫಿಕ್ಸ್‌: ಮೋಡಿ ಮಾಡುತ್ತಾ ರುಕ್ಮಿಣಿ ವಸಂತ್‌- ಶಿವಕಾರ್ತಿಕೇಯನ್‌ ಜೋಡಿ

Sampriya

ಮಂಗಳವಾರ, 15 ಏಪ್ರಿಲ್ 2025 (14:45 IST)
Photo Courtesy X
ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅವರು ನಟಿಸಿರುವ ಕಾಲಿವುಡ್‌ನ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳು ಸ್ಟಾರ್‌  ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ನಟಿಸಿರುವ ಮದರಾಸಿ ಸಿನಿಮಾದ ಕಾರ್ಯ ಭರದಿಂದ ಸಾಗಿದೆ.

ಅಮರನ್ ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಚಿತ್ರ ಮದರಾಸಿ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಆರು ಭಾಷೆಯಲ್ಲಿ ಚಿತ್ರ ಮೂಡಿಬರಲಿದೆ.

ಬಹುನಿರೀಕ್ಷಿತ ಈ ಸಿನಿಮಾ ಸೆಪ್ಟೆಂಬರ್ 5ರಂದು ರಿಲೀಸ್‌ ಆಗಲಿದೆ. ಸ್ಪೆಷಲ್ ಪೋಸ್ಟರ್‌ ಮೂಲಕ‌ ಚಿತ್ರತಂಡ ಬಿಡುಗಡೆ ದಿನಾಂಕ ರಿವೀಲ್‌ ಮಾಡಿದೆ. ಪೋಸ್ಟರ್‌ನಲ್ಲಿ ಶಿವಕಾರ್ತಿಕೇಯನ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ ಜಮ್ವಾಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಎನ್. ಶ್ರೀಲಕ್ಷ್ಮಿ ಪ್ರಸಾದ್ ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಹಲವರು ತಾರಾಬಳಗದಲ್ಲಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ