ಸಂತು ಜೊತೆ ಅರ್ಧ ಸೆಂಚುರಿ ಮುಗಿಸಿದ ಮುಕುಂದ ಮುರಾರಿ

ಶನಿವಾರ, 17 ಡಿಸೆಂಬರ್ 2016 (12:38 IST)
ಸ್ಯಾಂಡಲ್‌ವುಡ್‍ನಲ್ಲಿ ಮತ್ತೆ ಐವತ್ತು ನೂರು ದಿನಗಳ ಸಂಭ್ರಮವನ್ನು ನೋಡುವಂತಾಗಿದೆ. ಇಷ್ಟು ದಿನಗಳ ಕಾಲ ವಾರಕ್ಕೆಲ್ಲಾ ಎತ್ತಂಗಡಿಯಾಗುತ್ತಿದ್ದ ಸಿನಿಮಾಗಳಲ್ಲಿ ಗಟ್ಟಿಯಾಗಿ ಥಿಯೇಟರ್‌ನಲ್ಲಿ ಕಚ್ಚಿಕೊಳ್ಳುತ್ತಿದ್ದದ್ದು ಬೆರಳೆಣಿಕೆಯಷ್ಟು. 
 
ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನಲ್ಲಿ ಬಂದ ಮುಕುಂದ ಮುರಾರಿ ಚಿತ್ರ ಅರ್ಧ ಶತಕ ಪೂರೈಸಿದೆ. ಇದು ಬಾಲಿವುಡ್‌ನ ಓ ಮೈ ಗಾಡ್ ಚಿತ್ರದ ರೀಮೇಕ್ ಆದರೂ ಜನ ನೋಡಿರುವುದು ವಿಶೇಷ. ನಂದಕಿಶೋರ್ ಆಕ್ಷನ್ ಕಟ್ ನಲ್ಲಿ ಬಂದಂತ ಚಿತ್ರವಿದು. ಮೇನಕಾ ಚಿತ್ರಮಂದಿರದಲ್ಲಿ ಮುಕುಂದ ಮುರಾರಿ ಆಟ ನಡೀತಿದೆ. 
 
ಇನ್ನೊಂದು ಹನಿಮೂನ್ ಮೂಡ್‍ನಲ್ಲಿರುವ ಕಡೆ ರಾಕಿಂಗ್ ಸ್ಟಾರ್ ಯಶ್‌ಗೆ ಡಬಲ್ ಸಂಭ್ರಮ. ಅವರ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರವೂ ಅರ್ಧ ಸೆಂಚುರಿ ಪೂರೈಸಿದೆ. ಗಾಂಧಿನಗರದ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. 
 
 ಇತ್ತೀಚಿನ ದಿನಮಾನಗಳಲ್ಲಿ ಒಂದೋ ಎರಡೋ ಚಿತ್ರಗಳು ಐವತ್ತು ದಿನ ಪೂರೈಸುತ್ತಿವೆ. ಅದರಲ್ಲೂ ಬಿಗ್ ಬಜೆಟ್ ಚಿತ್ರಗಳಾದರೂ ನೆಲಕಚ್ಚುವುದು ತಪ್ಪುತ್ತಿಲ್ಲ. ಹೊಸಬರ ಚಿತ್ರಗಳೇ ಪರವಾಗಿಲ್ಲ ಎನ್ನುತ್ತಿರುವಾಗ ಸ್ಟಾರ್ ನಟರ ಸಿನಿಮಾಗಳು ಅರ್ಧ ಶತಕ ಪೂರೈಸಿರುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ