ನನ್ನ ಮಗಳು ಅರೆಸ್ಟ್ ಆಗ್ತಾಳೆ : ಭವಿಷ್ಯ ನುಡಿದ ನಟಿ ರಿಯಾ ಚಕ್ರವರ್ತಿ ತಂದೆ
ಭಾನುವಾರ, 6 ಸೆಪ್ಟಂಬರ್ 2020 (11:18 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಯ ತಂದೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಗ ಶೋಯಿಕ್ ಬಂಧನವಾದ ನಂತರ ಮಾತನಾಡಿರುವ ರಿಯಾ ಚಕ್ರವರ್ತಿಯ ತಂದೆ, ‘ಅಭಿನಂದನೆಗಳು ಭಾರತ, ಮುಂದಿನ ಸಾಲಿನಲ್ಲಿ ನನ್ನ ಮಗಳು’ಎಂದಿದ್ದಾರೆ.
ಶೋಯಿಕ್ ಚಕ್ರವರ್ತಿಯ ಬಂಧನದ ನಂತರ ಹೇಳಿಕೆ ನೀಡಿದ ನಟ ರಿಯಾ ಚಕ್ರವರ್ತಿಯ ತಂದೆ ಇಂದ್ರಜಿತ್, ಮಧ್ಯಮ ವರ್ಗದ ಕುಟುಂಬವನ್ನು ಹೇಗೆ ಕೆಡವಲಾಯಿತು ಮತ್ತು ರಿಯಾ ಚಕ್ರವರ್ತಿ ಮುಂದೆ ಅರೆಸ್ಟ್ ಆಗುವ ಬಗ್ಗೆ ಹೇಳಿದ್ದಾರೆ.
ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಅವರನ್ನು ಡ್ರಗ್ಸ್ ಕೇಸ್ ನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.
ನಟ ರಿಯಾ ಚಕ್ರವರ್ತಿಯ ತಂದೆ ಇಂದ್ರಜಿತ್ ಚಕ್ರವರ್ತಿ ಅವರು ತಮ್ಮ ಮಗ ಶೋಯಿಕ್ ಅವರ ಬಂಧನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.