ಸುಶಾಂತ್ ಸಿಂಗ್ ರಜಪೂತ್ ಸಾರಾ ಅಲಿ ಖಾನ್ ಗೆ ಪ್ರಪೋಸ್ ಮಾಡಿದ್ರಾ?

ಶನಿವಾರ, 5 ಸೆಪ್ಟಂಬರ್ 2020 (15:52 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಒಂದಷ್ಟು ದಿನ ನಟಿ ಸಾರಾ ಅಲಿಖಾನ್ ಜೊತೆಗೆ ಡೇಟಿಂಗ್ ನಡೆಸಿರುವುದು ಬಯಲಾಗಿದೆ.

ಈ ನಡುವೆ ಸುಶಾಂತ್ ಸಿಂಗ್ ರಜಪೂತ್ 2019 ರ ಜನವರಿಯಲ್ಲಿ ಸಾರಾ ಅಲಿ ಖಾನ್ ಅವರನ್ನು ಮದುವೆ ಪ್ರಪೋಸ್ ಮಾಡಲು ಯೋಚಿಸಿದ್ದರು ಎಂದು ಅವರ ತೋಟದ ಉಸ್ತುವಾರಿ ಹೇಳಿದ್ಧಾರೆ.
ಸುಶಾಂತ್ ಸಿಂಗ್ ರಜಪೂತ್ ತಮ್ಮ 'ಕೇದಾರನಾಥ್'  ಚಿತ್ರದ ಸಹನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ್ದಾರೆ ಎಂದು ಹಲವಾರು ವರದಿಗಳು ಹರಿದಾಡುತ್ತಿವೆ.

ಲೋನಾವಾಲಾದಲ್ಲಿರುವ ಸುಶಾಂತ್ ಸಿಂಗ್ ರ ತೋಟದ ಮನೆಯ ಉಸ್ತುವಾರಿಯೊಬ್ಬ ಹೇಳಿಕೆ ನೀಡಿದ್ದು, ಸುಶಾಂತ್‌ಗೆ 2019 ರ ಜನವರಿಯಲ್ಲಿ ಸಾರಾಗೆ ಪ್ರಪೋಸ್ ಮಾಡುವ ಯೋಜನೆ ಇತ್ತು ಎಂದು ಹೇಳಿಕೊಂಡಿದ್ದಾನೆ.

'ಸಾರಾ ಅಲಿ ಖಾನ್ ಮತ್ತು ಸುಶಾಂತ್ ಸಿಂಗ್ ಒಟ್ಟಿಗೆ ತೋಟದ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದರು.
ಅವರು ಬಂದಾಗಲೆಲ್ಲಾ ಮೂರರಿಂದ ನಾಲ್ಕು ದಿನಗಳವರೆಗೆ ತೋಟದ ಮನೆಯಲ್ಲಿಯೇ ಇರುತ್ತಿದ್ದರು. ಡಿಸೆಂಬರ್ 2018 ರಲ್ಲಿ ತಮ್ಮ ಥೈಲ್ಯಾಂಡ್ ಪ್ರವಾಸದಿಂದ ಹಿಂದಿರುಗಿದ ನಂತರ, ಸುಶಾಂತ್ ಮತ್ತು ಸಾರಾ ನೇರವಾಗಿ ವಿಮಾನ ನಿಲ್ದಾಣದಿಂದ ತೋಟದ ಮನೆಗೆ ಬಂದಿದ್ದರು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ