ಮೊದಲ ಪ್ರೀತಿ ದೂರವಾದಾಗ ಹೃದಯ ಒಡೆದು ಹೋಗಿತ್ತು: ಫಸ್ಟ್ ಮದುವೆ ಬಗ್ಗೆ ಅದಿತಿ ಬಿಚ್ಚು ಮಾತು

Sampriya

ಗುರುವಾರ, 28 ಮಾರ್ಚ್ 2024 (18:01 IST)
photo Courtesy Adithi Rao InstagramInstagram
ಮುಂಬೈ: ನಟ ಸಿದ್ಧಾರ್ಥ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಅದಿತಿ ರಾವ್ ಹೈದರಿ ಅವರಿಗೆ ಇದು ಎರಡನೇ ಸಂಬಂಧ. ಅದಿತಿ ರಾವ್ ಅವರ ತಮ್ಮ 21ನೇ ವಯಸ್ಸಿನಲ್ಲಿ ನಟ ಸತ್ಯದೀಪ್‌ ಮಿಶ್ರಾ ಅವರನ್ನು ಮದುವೆಯಾಗಿ, ವಿಚ್ಛೇಧನವನ್ನು ಪಡೆದರು.

ಈ ಸಂಬಂಧ ಬಗ್ಗೆ ನಟಿ ಅದಿತಿ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು 21ನೇ ವಯಸ್ಸಿನಲ್ಲಿ ಸತ್ಯದೀಪ್ ಅವರನ್ನು ಮದುವೆಯಾದೆ. ಆಗ ಅವರು ವಕೀಲರಾಗಿದ್ದರು. ನಂತರ ನಟನಾಗಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು.

ವಿಚ್ಛೇಧನದ ಬಗ್ಗೆ ಮಾತನಾಡಿದ ನಟಿ, ನಾವಿಬ್ಬರೂ ದೂರವಾದಾಗ ನನ್ನ ಹೃದಯ ಒಡೆದು ಹೋಗಿತ್ತು. ನಮ್ಮಿಬ್ಬರ ಮಧ್ಯೆ ಆ ಸಂಬಂಧ ಮುರಿದು ಹೋಗಿದೆ ಹೊರತು ಸ್ನೇಹ ಇನ್ನೂ ಹಾಗೇ ಇದೆ.

ಸತ್ಯದೀಪ್ ಅವರ ತಾಯಿಗೆ ನಾನು ಮಗಳಾಗಿ, ನನ್ನ ತಾಯಿಗೆ ಅವರು ಮಗನಾಗಿ ಯಾವಾಗಲೂ ಇರುತ್ತೇವೆ. ಸತ್ಯದೀಪ್ ಅವರು ನನಗಿಂತ ತುಂಬಾ ದೊಡ್ಡವರು ಎಂದರು.

ಸತ್ಯದೀಪ್ ಅವರು ಅದಿತಿ ಜತೆಗಿದ್ದ ರಿಲೇಶನ್‌ ಶಿಪ್ ಬಗ್ಗೆ ಮಾತನಾಡಿ, ನನಗೆ ಅದಿತಿ ಜತೆಗಿದ್ದ ರಿಲೇಶನ್‌ಶಿಪ್‌ನಿಂದಾಗಿ ನಾನು ಪ್ರೀತಿಯನ್ನು ದ್ವೇಷಿಸುತ್ತಿದ್ದೆ. ನಾನು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲು ಭಯಪಡುತ್ತಿದ್ದೆ ಎಂದು ಹೇಳಿದರು.  

ಅದಿತಿ ಜತೆಗಿನ ವಿಚ್ಛೇಧನದ ಕೆಲ ವರ್ಷಗಳ ನಂತರ ಸತ್ಯದೀಪ್ ಅವರು ಡಿಸೈನರ್ ಮಸಬಾ ದುಪ್ತಾ ಅವರನ್ನು ಮದುವೆಯಾದರು.  ಇವರ ದಾಂಪತ್ಯ ಜೀವನಕ್ಕೆ ನಟಿ ಅದಿತಿ ರಾವ್ ಅವರು ಶುಭಕೋರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ