ಲಾಲ್ ಸಿಂಗ್ ಚಡ್ಡಾ ಟ್ರೈಲರ್ ನಲ್ಲಿ ಸೈಡ್ ಲೈನ್ ಆದ ನಾಗಚೈತನ್ಯ: ಫ್ಯಾನ್ಸ್ ಗರಂ

ಸೋಮವಾರ, 30 ಮೇ 2022 (16:12 IST)
ಮುಂಬೈ: ಅಮೀರ್ ಖಾನ್ ನಾಯಕರಾಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಆದರೆ ಟ್ರೈಲರ್ ನೋಡಿದ ಕೆಲವರಿಗೆ ನಿರಾಸೆಯಾಗಿದೆ.

ಇದಕ್ಕೆ ಕಾರಣ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ ನಾಗಚೈತನ್ಯ ಕೂಡಾ ನಟಿಸಿದ್ದಾರೆ. ಆದರೆ ಟ್ರೈಲರ್ ನಲ್ಲಿ ಅವರ ದೃಶ್ಯಗಳನ್ನು ಹೆಚ್ಚಾಗಿ ತೋರಿಸಿಲ್ಲ.

ಇದು ತೆಲುಗು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನನ್ನು ಸೈಡ್ ಲೈನ್ ಮಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಈ ಕಾರಣಕ್ಕೆ ಕೆಲವರು ಸಿನಿಮಾ ಬಹಿಷ್ಕರಿಸಿ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ