ಸಮಂತಾ ಸಿಕ್ಕರೆ ತಬ್ಬಿಕೊಳ್ಳುವ ಆಸೆಯಂತೆ ನಾಗಚೈತನ್ಯಗೆ

ಬುಧವಾರ, 10 ಆಗಸ್ಟ್ 2022 (09:45 IST)
ಹೈದರಾಬಾದ್: ಸಮಂತಾ ಋತು ಪ್ರಭುವಿನಿಂದ ದೂರವಾಗಿದ್ದರೂ ನಟ ನಾಗಚೈತನ್ಯ ಇನ್ನೂ ಹಳೆಯ ಹೆಂಡತಿಯನ್ನು ಮರೆತಿಲ್ಲ ಎನ್ನುವುದಕ್ಕೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯೇ ಸಾಕ್ಷಿ.

ಸಂದರ್ಶನವೊಂದರಲ್ಲಿ ನಾಗಚೈತನ್ಯಗೆ ಸಮಂತಾ ಮತ್ತೆ ಸಿಕ್ಕರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಾಗಚೈತನ್ಯ ಕೊಟ್ಟ ಉತ್ತರ ಎಲ್ಲರನ್ನೂ ಅಚ್ಚರಿಗೊಳಗಾಗಿಸಿದೆ.

‘ಮೊದಲು ಹಾಯ್ ಹೇಳಿ ಬಳಿಕ ತಬ್ಬಿಕೊಳ್ಳುತ್ತೇನೆ’ ಎಂದಿದ್ದಾರೆ. ಸಮಂತಾ ಮತ್ತು ತಮ್ಮ ಮದುವೆಯ ಸವಿನೆನಪಿನಲ್ಲಿ ನಾಗಚೈತನ್ಯ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಟ್ಯಾಟೂ ಈಗಲೂ ನಾಗಚೈತನ್ಯ ಕೈಯಲ್ಲಿದೆ. ಇದನ್ನು ಅಳಿಸುವ ಯೋಚನೆಯೂ ಸದ್ಯಕ್ಕಿಲ್ಲ ಎಂದಿದ್ದಾರೆ ನಾಗಚೈತನ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ