ಮುಂದಿನ ವರ್ಷ ದಸರಾ ಬರದೇ ರಿಲೀಸ್ ಆಗದು ಸಲಾರ್?
ಇದೀಗ ತೆಲುಗು ಸಿನಿಮಾ ನಿರ್ಮಾಪಕರ ಸಂಘದ ಸ್ಟ್ರೈಕ್ ನಿಂದಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಸಲಾರ್ ಸಿನಿಮಾ ಅರ್ಧದಷ್ಟು ಚಿತ್ರೀಕರಣ ಮುಗಿದಿದೆಯಷ್ಟೇ. ಈಗಿನ ಪ್ರಕಾರ ನೋಡಿದರೆ ಚಿತ್ರೀಕರಣ ಮುಗಿಯಲು ಇನ್ನೂ 7-8 ತಿಂಗಳು ಬೇಕು. ಅಂದರೆ ಮುಂದಿನ ವರ್ಷ ಮಾರ್ಚ್ ಆಗಬಹುದು.
ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದು ಚಿತ್ರ ಬಿಡುಗಡೆಯಾಗುವಾಗ ಮುಂದಿನ ವರ್ಷ ದಸರಾ ಆಗೋದು ಗ್ಯಾರಂಟಿ ಎನ್ನಲಾಗಿದೆ.