ನಟಿ ಸಂಜನಾ ಮೀಟೂ ಆರೋಪಕ್ಕೆ ದಾಖಲೆ ಸಮೇತ ಮಾಹಿತಿ ನೀಡಿದ ಗೀತ ರಚನೆಕಾರ ನಾಗೇಂದ್ರ ಪ್ರಸಾದ್

ಬುಧವಾರ, 24 ಅಕ್ಟೋಬರ್ 2018 (10:04 IST)
ಬೆಂಗಳೂರು : ಗಂಡ ಹೆಂಡತಿ ಸಿನಿಮಾದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಒತ್ತಾಯಪೂರ್ಕವಾಗಿ ನನ್ನಿಂದ ಕಿಸ್ ಸೀನ್ ಗಳನ್ನು ಮಾಡಿಸಿಕೊಂಡಿದ್ದರು ಎಂದು ನಟಿ ಸಂಜನಾ ಆರೋಪ ಮಾಡಿದ್ದರು. ಇದೀಗ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಈ ಆರೋಪಕ್ಕೆ ದಾಖಲೆ ನೀಡಿದ್ದಾರೆ.


ಸೋಮವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ನಾಗೇಂದ್ರ ಪ್ರಸಾದ್ ಅವರು,’ ಗಂಡ-ಹೆಂಡತಿ ಚಿತ್ರದ ಬಿಡುಗಡೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಜನಾ ಅವರು, ನಾವು ಗೌರಮ್ಮನಂತಿದ್ದರೆ ಯಾರೂ ನಮ್ಮನ್ನು ನೋಡುವುದಿಲ್ಲ. ಪಾತ್ರಕ್ಕೆ ಬೇಕಂತೆ ನಾವು ಅಭಿನಯಿಸಬೇಕು ಎಂದು ಸ್ವತಃ ಅವರೇ ಹೇಳಿದ್ದರು ಎಂದು 'ಕನ್ನಡಪ್ರಭ' ಪತ್ರಿಕೆಯ 2006ರ ವರದಿಯೊಂದನ್ನು  ಉಲ್ಲೇಖ ಮಾಡಿದ್ದಾರೆ.


ಹಾಗೇ ಹೀಗೆ ಹೇಳಿರುವ ಸಂಜನಾ ಗಂಡ-ಹೆಂಡತಿ ಚಿತ್ರಕ್ಕಾಗಿ ನಿರ್ದೇಶಕರು 32ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಬೇಕಾಗೆ ತೆಗೆಸಿಕೊಂಡರು ಎಂದು ನಿರ್ದೇಶಕನ ತೇಜೋವಧೆ ಮಾಡುವುದು ಎಷ್ಟು ಸರಿ ಎಂದು ನಾಗೇಂದ್ರ ಪ್ರಸಾದ್ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ