ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಖ್ಯಾತ ನಟನ ಪುತ್ರಿ

ಭಾನುವಾರ, 26 ಜನವರಿ 2020 (09:08 IST)
ಮುಂಬೈ: ಬಾಲಿವುಡ್ ನಟ ನಾಸಿರುದ್ದೀನ್ ಶಾ ಪುತ್ರಿ, ನಟಿ ಹೀಬಾ ಶಾ ಪಶು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೊಳಗಾಗಿದ್ದು ಪ್ರಕರಣ ದಾಖಲಾಗಿದೆ.


ಮುಂಬೈನ ವರ್ಸೋವಾ ಪಶು ವೈದ್ಯಕೀಯ ಆಸ್ಪತ್ರೆಯ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಈ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಹೀಬಾ ಶಾ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜನವರಿ 16 ರಂದು ಘಟನೆ ನಡೆದಿತ್ತು ಎನ್ನಲಾಗಿದೆ. ಇದೀಗ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಸ್ಪತ್ರೆ ಮೂಲಗಳ ಪ್ರಕಾರ ಹೀನಾ ತಮ್ಮ ಸ್ನೇಹಿತೆಯ ಜತೆಗೆ ಆಕೆಯ ಎರಡು ಬೆಕ್ಕಿಗಳಿಗೆ ಚುಚ್ಚು ಮದ್ದು ಹಾಕಿಸಲು ಆಸ್ಪತ್ರೆಗೆ ಬಂದಿದ್ದರು. ಆದರೆ ಆಗ ವೈದ್ಯರು ಬೇರೊಂದು ಕೇಸ್ ನೋಡುತ್ತಿದ್ದರು. ಹೀಗಾಗಿ ಐದು ನಿಮಿಷ ಕಾಯಲು ಹೇಳಲಾಗಿತ್ತು. ಎರಡು-ಮೂರು ನಿಮಿಷ ಕಾದ ಬಳಿಕ ಹೀನಾ ತೀರಾ ಆಕ್ರೋಶಗೊಂಡು ವಾಗ್ವಾದಕ್ಕಿಳಿದರು. ಈ ಸಂಘರ್ಷದ ನಡುವೆ ಆಕೆ ಅಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ