ಡಾ.ರಾಜ್ ಕುಮಾರ್ ನೆನಪಿಸಿಕೊಂಡ ಬಿಗ್ ಬಿ ಅಮಿತಾಭ್ ಬಚ್ಚನ್

ಶನಿವಾರ, 25 ಜನವರಿ 2020 (09:03 IST)
ಮುಂಬೈ: ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ದಕ್ಷಿಣ ಭಾರತದ ಸ್ಟಾರ್ ನಟರ ಜತೆಗೆ ಒಂದು ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.


ಈ ಜಾಹೀರಾತಿನ ಚಿತ್ರೀಕರಣದಲ್ಲಿ ಕತ್ರಿನಾ ಕೈಫ್ ಮದುಮಗಳಾಗಿದ್ದರೆ, ಅಮಿತಾಭ್ ಮತ್ತು ಜಯಾ ತಂದೆ-ತಾಯಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಜಾಹೀರಾತು ಚಿತ್ರೀಕರಣದಲ್ಲಿ ತೆಲುಗು ನಟ ನಾಗಾರ್ಜುನ, ತಮಿಳು ನಟ ಪ್ರಭು ಮತ್ತು ಕನ್ನಡ ನಟ ಶಿವರಾಜ್ ಕುಮಾರ್ ಕೂಡಾ ಪಾಲ್ಗೊಂಡಿದ್ದಾರೆ.

ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಬಿಗ್ ಬಿ ಈ ಸ್ಟಾರ್ ನಟರ ತಂದೆಯನ್ನು ಸ್ಮರಿಸಿಕೊಂಡು ಅವರ ಜತೆ ಕೆಲಸ ಮಾಡಿದ್ದೇ ನನಗೆ ಗೌರವ ಎಂದಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಪುತ್ರ ನಾಗಾರ್ಜುನ, ಡಾ. ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್, ಶಿವಾಜಿ ಗಣೇಶನ್ ಪುತ್ರ ಪ್ರಭು ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಗೌರವ ಎಂದು ಬಿಗ್ ಬಿ ಬ್ಲಾಗ್ ನಲ್ಲೂ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ