ಶರಣ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ನಟರಾಜ ಸರ್ವೀಸ್' ನವೆಂಬರ್ 17ಕ್ಕೆ ಬಿಡುಗಡೆ ಕಾಣುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಅಕ್ಟೋಬರ್21 ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳ ಅಭಾವದಿಂದ ಬಿಡುಗಡೆಯನ್ನು ಮುಂದೂಡಲಾಗಿತ್ತು.
ಪವನ್ ಒಡೆಯರ್ ಚಿತ್ರವನ್ನು ನಿರ್ದೇಶಿಸಿದ್ದು, ಕಥೆ, ಚಿತ್ರಕಥೆ ಸಹ ಅವರದೆ. ಮಯೂರಿ ನಾಯಕಿಯಾಗಿ ಅಭಿನಯಸಿದ್ದು, ರವಿಶಂಕರ್, ರಾಕ್ಲೈನ್ ವೆಂಕಟೇಶ್, ರವಿಶಂಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ' ಅಲ್ಲಾ ಅಲ್ಲಾ ' ಸೇರಿದಂತೆ ಎರಡು ಹಾಡುಗಳು ಈಗಾಗಲೇ ಜನರ ಬಾಯಲ್ಲಿ ಹರಿದಾಡುತ್ತಿವೆ
'ರಾಜ್- ವಿಷ್ಣು' ಮತ್ತು 'ಸತ್ಯ ಹರಿಶ್ಚಂದ್ರ' ಶರಣ್ ಅವರ ಮುಂಬರುವ ಸಿನಿಮಾಗಳಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ