ಪತಿ ವಿಘ್ನೇಶ್ ಶಿವನ್ ತಪ್ಪಿನಿಂದ ಆಸ್ಪತ್ರೆ ಸೇರಿದ ನಯನತಾರಾ

ಬುಧವಾರ, 10 ಆಗಸ್ಟ್ 2022 (10:12 IST)
ಚೆನ್ನೈ: ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ನಯನತಾರಾ-ವಿಘ್ನೇಶ್ ಶಿವನ್ ಈಗ ದಾಂಪತ್ಯ ಜೀವನದ ಖುಷಿಯಲ್ಲಿದ್ದಾರೆ. ಆದರೆ ಈ ನಡುವೆ ವಿಘ‍್ನೇಶ್ ಮಾಡಿರುವ ಎಡವಟ್ಟಿನಿಂದ ನಯನತಾರಾ ಆಸ್ಪತ್ರೆ ಸೇರುವಂತಾಗಿದೆ.

ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿಯ ಇಂಪ್ರೆಸ್ ಮಾಡಲು ಏನೇನೋ ಸರ್ಕಸ್ ಮಾಡುವುದು ಸಹಜ. ಅದೇ ರೀತಿ ನಯನತಾರಾಗೆ ಖುಷಿಯಾಗಲೆಂದು ವಿಘ‍್ನೇಶ್ ಅಡುಗೆ ಪ್ರಯೋಗ ಮಾಡಿದ್ದಾರಂತೆ.

ಇದನ್ನು ಸೇವಿಸಿದ ನಯನತಾರಾಗೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆ ಸೇರಿದ್ದಾರೆ. ಚಿಕಿತ್ಸೆ ಬಳಿಕ ನಯನತಾರಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಸುದ್ದಿ ಹರಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ