ಅಷ್ಟೇ ಅಲ್ಲದೆ ಒಡವೆ ಅಂಗಡಿ, ಸೀರೆ ಅಂಗಡಿ ಹೀಗೆ ಹಲವಾರು ಅಂಗಡಿಗಳ ಓಪನಿಂಗ್ಸ್ ನಲ್ಲೂ ಸಹಿತ ಇವರನ್ನು ಕರೆಯುವ ಕ್ರೇಜ್ ಇದೆ ಸಾಕಷ್ಟು ಬ್ಯುಸಿನೆಸ್ ಮಂದಿಗೆ.ಆದರೆ ನಯನತಾರ ಮಾತ್ರ ಇಂತಹ ಕಾರ್ಯಕ್ರಮಗಳಿ ಹೋಗಲು ಇಷ್ಟ ಪಡುವುದಿಲ್ಲವಂತೆ.
ಹಿಂದೆ ಎಂದೋ ಒಂದು ಬಾರಿ ಆಕೆ ಸೀರೆಯ ಜಾಹೀರಾತಲ್ಲಿ ಕಂಡಿರೋದು, ಅದನ್ನು ಹೊರೆತು ಪಡಿಸಿ ಇಂತಹ ಯಾವ ಓಪನಿಂಗ್ಸ್ ಕಡೆಗೂ ಆಕೆ ಗಮನ ನೀಡಿಲ್ಲ ಎಂದೇ ಹೇಳ ಬಹುದಾಗಿದೆ.
ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ ಹೆಸರು ಮಾಡಿದ ಕಲಾವಿದರು ತಮ್ಮನ್ನು ಜಾಹೀರಾತಿನಲ್ಲಿ ತೊಡಗಿಸಿಕೊಳ್ಳುತ್ತ ತಮ್ಮ ಕ್ರೇಜ್ ನ್ನು ಕ್ಯಾಶ್ ಮಾಡಿಕೊಂಡು ದುಡ್ಡಿನ ಚೀಲ ದೊಡ್ಡದು ಮಾಡಿಕೊಳ್ಳುತ್ತಾರೆ. ಕೆಲವರು ನಾಲ್ಕೈದು ಉತ್ಪನ್ನಗಳಲ್ಲಿ ಇರುತ್ತಾರೆ. ಇದು ಎಲ್ಲ ಭಾಷೆಯಲ್ಲಿ ಕಂಡು ಬರುವ ಪರಂಪರೆ.
ಇದಕ್ಕೆ ಕಾರಣಗಳನ್ನು ಹೇಳಿರುವ ನಯನ್ ಶಾಪ್ ಒಪನಿಂಗ್ಸ್ ಗೆ ಒಪ್ಪಿದೆ ಎಂದರೆ ನಾವು ಹೋದ ಬಳಿಕ ಪೂಜೆಯ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ನಾಲ್ಕೈದು ಸೀರೆಗಳನ್ನು ನೀಡಿ ಒಂದಾದ ಬಳಿಕ ಮತ್ತೊಂದನ್ನು ಧರಿಸುವಂತೆ ಹೇಳುತ್ತಾರೆ.
ಆ ಸೀರೆಗಳಲ್ಲಿ ನಾವು ಪೋಸ್ ಕೊಡ ಬೇಕು. ಆ ಫೋಟೋಗಳ ದೊಡ್ಡ ಹೋರ್ಡಿಂಗ್ಸ್ ಸಿದ್ಧ ಮಾಡಿ ಹಾಕಿ ಬಿಟ್ರಾಯಿತು. ಇನ್ನು ಸೆಲಬ್ರಿಟಿಗಳು ಬರುತ್ತಾರೆಂದು ಮೊದಲೇ ಹೇಳಿರುತ್ತಾರೆ. ಆಗ ಜನಜಂಗುಳಿ. ಇದರಿಂದ ಟೆನ್ಶನ್ ಆಗೇ ಆಗುತ್ತದೆ. ಅಂತಹ ಟೆನ್ಶನ್ ಗಿಂತ ಮನೆಯಲ್ಲಿ ಇರೋದು ವಾಸಿ ಎಂದು ಹೇಳಿದ್ದಾಳೆ ಈ ಜಾಣೆ!