ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ಪೋಷಕರಾದ ನಯನತಾರಾ-ವಿಘ್ನೇಶ್
ನಯನ್-ವಿಘ್ನೇಶ್ ಅವಳಿ ಮಕ್ಕಳಿಗೆ ಪೋಷಕರಾಗಿರುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಬಾಡಿಗೆ ತಾಯಿ ಮೂಲಕ ನಯನ್-ವಿಘ‍್ನೇಶ್ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ.
ಮಗುವಿನ ಕಾಲಿಗೆ ಮುತ್ತಿಕ್ಕುವ ಫೋಟೋವನ್ನು ವಿಘ‍್ನೇಶ್ ಹಂಚಿಕೊಂಡಿದ್ದಾರೆ. ಜೂನ್ 9 ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.