ಹೊಸ ವರ್ಷದ ಹೊಸ ಕನ್ನಡ ಚಿತ್ರಗಳು

ಗುರುಮೂರ್ತಿ

ಶುಕ್ರವಾರ, 29 ಡಿಸೆಂಬರ್ 2017 (11:30 IST)
ಸ್ಯಾಂಡಲ್‌ವುಡ್‌ನಲ್ಲಿ 2018 ನೇ ವರ್ಷ ಅದ್ದೂರಿಯಾಗಿ ಪ್ರಾರಂಭಗೊಳ್ಳುತ್ತಿದೆ ಎಂದೇ ಹೇಳಬಹುದು 2018 ರಲ್ಲಿ ಸ್ಟಾರ್ ನಟರ ಸಾಲು ಸಾಲು ಚಿತ್ರಗಳು ಬೆಳ್ಳಿತೆರೆಗೆ ಬರಲಿದ್ದು ಅದರ ಕುರಿತು ಒಂದು ಕಿರುನೋಟ ಇಲ್ಲಿದೆ.
 
ಬೃಹಸ್ಪತಿ

ಸಾಹೇಬ ಚಿತ್ರದ ಮೂಲಕ ಪರಿಚಿತರಾಗಿರುವ ಮನೋರಂಜನ್ ರವಿಚಂದ್ರನ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರಕ್ಕೆ ಮುಂಬೈ ಮೂಲದ ಬೆಡಗಿ ಮಿಸ್ಟಿ ಚಕ್ರಬೂರ್ತಿ ನಾಯಕಿಯಾಗಿದ್ದಾರೆ. ಈ ಚಿತ್ರವು ತಮಿಳಿನ ಬ್ಲಾಕ್‌ಬಾಸ್ಟರ್‌ ಚಿತ್ರವಾಗಿರುವ ವೆಲೈಯಾಲ್ಲಾ ಪಟ್ಟಧರಿಯ ರೀಮೇಕ್ ಆಗಿದೆ. ರಾಕ್‌ಲೈನ್ ಪ್ರೊಡಕ್ಷನ್‌ ನಿರ್ಮಾಣದ ಈ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ನಂದಕಿಶೋರ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವಿ ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸಾಧು ಕೋಕಿಲ, ಅವಿನಾಶ, ಸಿತಾರಾ, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮತ್ತು ಇತರರು ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಜನವರಿ ತಿಂಗಳಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ ಎಂದು ಮೂಲಗಳು ಹೇಳಿವೆ.
 
ಕೆಜಿಎಫ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಾರಿ ಬಜೇಟ್ ಚಿತ್ರ ಕೆಜಿಎಫ್ ಮೂಹೂರ್ತವಾದ ದಿನದಿಂದಲೂ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದು. ಉತ್ತರ ಕರ್ನಾಟಕದಲ್ಲಿ ನೆಡೆದ 80 ರ ದಶಕದ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಂಬಾಳೆ ಪ್ರೊಡೆಕ್ಷನ್ ನಿರ್ಮಾಣದ ಈ ಚಿತ್ರಕ್ಕೆ ಶ್ರಿನಿಧಿ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದು ಅಚ್ಚುತ್ ಕುಮಾರ್, ವಶಿಷ್ಠ ಎನ್ ಸಿಂಹಾ, ಬಿ ಸುರೇಶ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಉಗ್ರಂ ಖ್ಯಾತಿಯ ಪ್ರಶಾಂತ್ ನಿಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದು  ರವಿ ಬಸೂರ್ ಅವರ ಸಂಗೀತ ಈ ಚಿತ್ರಕ್ಕಿದೆ ಈ ಚಿತ್ರವು ಜನವರಿ ತಿಂಗಳಲ್ಲಿ ಬರುವ ನಿರೀಕ್ಷೆಯಲ್ಲಿದೆ.
 
ದಿ ವಿಲನ್

ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಅದ್ದೂರಿ ಚಿತ್ರ ದಿ ವಿಲನ್ ಚಿತ್ರ ಫೆಬ್ರುವರಿ ತಿಂಗಳಲ್ಲಿ ಬಿಡುಗಡೆಗೊಳ್ಳಲಿದ್ದು ಇದರಲ್ಲಿ ಏಮಿ ಜಾಕ್ಷನ್ ತೆಲಗು ಸ್ಟಾರ್ ಶ್ರೀಕಾಂತ್, ಬಾಲಿವೂಡ್ ಸ್ಟಾರ್ ಮಿಥುನ್ ಚಕ್ರಬೂರ್ತಿ ಸಹ ಅಭಿನಯಿಸುತ್ತಿದ್ದಾರೆ. ಸಿ. ಆರ್ ಮನೋಹರ್ ಈ ಬಾರೀ ಬಜೇಟ್‌ ಹಾಕಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಗೀರಿಶ್ ಗೌಡ ಛಾಯಾಗ್ರಹಣವಿದ್ದು ಜೋಗಿ ಖ್ಯಾತಿಯ ಫ್ರೇಮ್ ಕಥೆ ಚಿತ್ರಕಥೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.
 
ಈಗಾಗಲೇ ಈ 3 ಚಿತ್ರಗಳ ಟ್ರೇಲರ್ ಯುಟ್ಯೂಬ್‌ನಲ್ಲಿ ಲಭ್ಯವಿದ್ದು ಅಭಿಮಾನಿಗಳು ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಹೊಸವರ್ಷದಲ್ಲಿ ಬಾರಿ ಕೂತುಹಲವನ್ನು ಹುಟ್ಟು ಹಾಕಿರುವ ಈ 3 ಚಿತ್ರಗಳು ಅಭಿಮಾನಿಗಳನ್ನು ಯಾವ ರೀತಿ ಜನರನ್ನು ರಂಜಿಸುತ್ತವೆ ಎನ್ನೋದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ