ಹೊಸ ವರ್ಷದಲ್ಲಿ ಲಗ್ಗೆ ಇಡುತ್ತಿವೆ ಹೊಸ ಮಾದರಿ ಬೈಕ್‌ಗಳು

ಗುರುಮೂರ್ತಿ

ಬುಧವಾರ, 20 ಡಿಸೆಂಬರ್ 2017 (20:42 IST)
ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ನೂತನ ಬೈಕ್‌ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗ ಸಾಕಷ್ಟು ವಿದೇಶಿ ಕಂಪನಿಗಳು ತಮ್ಮ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ತರಲು ಮುಂದಾಗುತ್ತಿರುವುದು ಒಳ್ಳೆಯ ವಿಚಾರವೇ ಸರಿ. ಇದರಿಂದ ಬೈಕ್ ಮಾರಾಟದಲ್ಲಿ ಪೈಫೋಟಿ ಉಂಟಾಗುವ ಕಾರಣ ದೇಶಿಯ ಗ್ರಾಹಕರನ್ನು ಸೆಳೆಯಲು ಹಲವಾರು ವಿದೇಶಿ ಕಂಪನಿಗಳು ಭಾರತಕ್ಕೆ ಹೊಂದಿಕೆಯಾಗುವಂತ ಉತ್ಕ್ರಷ್ಟ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ.
 
ಹೊಸ ವರ್ಷ ಭಾರತದ ಮಾರುಕಟ್ಟೆಯಲ್ಲಿ ಹಲವಾರು ಬೈಕ್ ಮಾದರಿಗಳು ಲಭ್ಯವಿದ್ದು ಅದರಲ್ಲಿ ಹೆಚ್ಚು ಕೂತುಹಲ ಮೂಡಿಸಿರುವುದು ಕ್ಲೆವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಕಂಪನಿಯ ಈ ಎರಡು ಬೈಕ್‌ಗಳು. ಇದು ಮೂಲತಃ ಯುಎಸ್ ಕಂಪನಿಯಾಗಿದ್ದು ಇದು ಪ್ರಪಂಚದಾದ್ಯಂತದ 23 ದೇಶಗಳಲ್ಲಿ 250-450 ಸಿಸಿ ವರೆಗಿನ ಬೈಕುಗಳನ್ನು ತಯಾರಿಸುತ್ತದೆ. ಇದರ ವಿನ್ಯಾಸ ತುಂಬಾ ಆಕರ್ಷಕವಾಗಿದ್ದು ಗಾಹಕರನ್ನು ಸೆಳೆಯುವಲ್ಲಿ ಸಂದೇಹವಿಲ್ಲ ಎನ್ನುತ್ತಿದೆ ಮೂಲಗಳು. ಇದು ತನ್ನ ಎರಡು ಬೈಕ್ ಮಾದರಿಯನ್ನು ಹೊರ ಹಾಕಿದ್ದು 2018 ರ ಫೇಬ್ರುವರಿಯಲ್ಲಿ ಈ ಬೈಕ್‌ಗಳು ಭಾರತದ ಮಾರುಕಟ್ಟೆಗೆ ಬರಲಿವೆ ಎಂದು ಅಂದಾಜಿಸಲಾಗಿದೆ.
 
ಕ್ಲೆವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಏಸ್
ಅತ್ಯಾಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಕ್ಲೆವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಏಸ್ ಮಾದರಿಯು 229.5 ಸಿಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಏರ್ ಕೂಲ್‌ ತಂತ್ರಜ್ಞಾನವನ್ನು ಹೊಂದಿದೆ. ಈ ಬೈಕ್‌ನಲ್ಲಿ ಗಂಟೆಗೆ 113 ಕಿಮೀ. ವರಗೆ ಪ್ರಯಾಣಿಸಬಹುದಾಗಿದ್ದು 5 ಗೇರ್‌ಗಳನ್ನು ಹೊಂದಿದೆ. ಇದು 12 ಲೀಟರ್ ಇಂಧನ ಟ್ಯಾಂಕ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು ಇದು ಕಿಕ್ ಸ್ಟಾರ್ಟ ಮತ್ತು ಸೆಲ್ಪ ಸ್ಟಾರ್ಟ ಎರಡನ್ನು ಹೊಂದಿದೆ. ಇದರ ಗರಿಷ್ಟ ಶಕ್ತಿಯು 14.27 PS @ 7000rpm ಇದ್ದು ಮುಂದಿನ ಚಕ್ರವು ಡಿಸ್ಕ ಬ್ರೇಕ್ ಸಿಸ್ಟಂ ಮತ್ತು ಹಿಂದಿನ ಚಕ್ರವು ಡ್ರಮ್ ಬ್ರೇಕ್ ಸಿಸ್ಟಂ ಅನ್ನು ಹೊಂದಿದೆ. ಇದರಲ್ಲಿ ABS ಮತ್ತು CBS ಎರಡು ರೀತಿಯ ಬ್ರೇಕ್‌ ಸಿಸ್ಟಂನಲ್ಲಿ ಲಭ್ಯವಿದ್ದು 126 ಕೇಜಿಯಷ್ಟು ಭಾರವನ್ನು ಹೊಂದಿದೆ.
 
ಇದು ಕ್ಲಾಸಿಕ್ ಮಾದರಿಯ ವಿನ್ಯಾಸವನ್ನು ಹೊಂದಿದ್ದು ದೈನಂದಿನ ಬಳಕೆಗೆ ಉಪಯೋಗವಾಗುವ ರೀತಿಯಲ್ಲಿ ಇದನ್ನು ವಿನ್ಯಾಸಪಡಿಸಲಾಗಿದೆ ಅಲ್ಲದೇ ಇದರ ಹೆಡ್‌ಲ್ಯಾಂಪ್, ಎಕ್ಸಾಸ್ಟ್ ಮತ್ತು ಸ್ಪೀಕ್ ಚಕ್ರಗಳು ಹಳೆಯ ಕಾಲದ ಬೈಕುಗಳನ್ನು ನೆನಪಿಸುತ್ತದೆ. ಇದು ಮುಂದಿನ ದಿನಗಳಲ್ಲಿ ಇದರ ಪ್ರೀಮಿಯಂ ಆವೃತ್ತಿಗಳು ಬರಲಿದ್ದು ಕೆಫೆ ರೇಸರ್, ಏಸ್ ಡಿಲಕ್ಸ್, ಏಸ್ ಕೆಫೆ ಮತ್ತು ಏಸ್ ಸ್ಕ್ರ್ಯಾಂಬ್ಲರ್ ಎಂದು ಹೇಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ 1,25,000 ಎಂದು ಅಂದಾಜಿಸಲಾಗಿದೆ.
 
ಕ್ಲೆವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಮಿಸ್‌ಫಿಟ್
ಕ್ಲೆವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಕಂಪನಿಯು ಕ್ಲಾಸಿಕ್ ಮಾದರಿಯಲ್ಲಿಯೇ ಮತ್ತೊಂದು ಬೈಕನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು ಕೂಡಾ 250 ಸಿಸಿ ಸಾಮರ್ಥ್ಯದ ಎಂಜಿನ್ ಅನ್ನು ಹೊಂದಿದ್ದು ಇದರ ಆಸನ ವಿನ್ಯಾಸವು ತುಂಬಾ ಆಕರ್ಷಕವಾಗಿದೆ ಇದು ಪಿರಿಯನ್ ಮಾದರಿಯ ಆಸನ ವ್ಯವಸ್ಥೆ ಹೊಂದಿದ್ದು ಅದನ್ನು ಅವಶ್ಯಕತೆಗೆ ಅನುಗುಣವಾಗಿ ತೆಗೆಯಬಹುದಾಗಿದೆ ಇದು ಅನಾಲಾಗ್ ಸ್ಪೀಡೋಮೀಟರ್ ಮತ್ತು ಟ್ಯಾಕ್ನೋಮೀಟರ್ ಹೊಂದಿದ್ದು ಉತ್ತಮ ಗುಣಮಟ್ಟದ ಸಸ್ಪೆನ್‌ಶನ್ ಅನ್ನು ಹೊಂದಿದೆ. 12 ಲೀಟರ್ ಇಂಧನ ಟ್ಯಾಂಕ್ ಅನ್ನು ಅಳವಡಿಸಲಾಗಿದ್ದು ಇದು 144 ಕೇಜಿಯಷ್ಟು ಭಾರವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ 1,50,000 ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ