ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ಹೊಸ ಸಿನಿಮಾ ಟೈಟಲ್ ರಿವೀಲ್

ಶನಿವಾರ, 22 ಜನವರಿ 2022 (10:20 IST)
ಬೆಂಗಳೂರು: ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಇಂದು ಜನ್ಮದಿದ ಸಂಭ್ರಮವಾಗಿದ್ದು, ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಇಂದು ರಿಲೀಸ್ ಆಗಲಿದೆ.

ಈ ಬಾರಿ ಕೊರೋನಾ ಕಾರಣದಿಂದ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲ್ಲ ಎಂದು ನಿಖಿಲ್ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಅವರ ಮನೆ ಬಳಿ ಯಾರೂ ಬರುವುದು ಬೇಡ ಎಂದಿದ್ದಾರೆ.

ಆದರೆ ಅಭಿಮಾನಿಗಳ ಸಂತೋಷಕ್ಕಾಗಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬರಲಿರುವ ಮನು ಅಥರ್ವ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ