ಮತ್ತೆ ತೆರೆ ಮೇಲೆ ಯಶ್-ರಾಧಿಕಾ! ನೆಟ್ಟಿಗರು ಫುಲ್ ಫಿದಾ
ಇದೀಗ ಯಶ್-ರಾಧಿಕಾ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಜಾಹೀರಾತಿನಲ್ಲಿ. ಅಡುಗೆ ಎಣ್ಣೆಯ ಜಾಹೀರಾತಿಗಾಗಿ ರಾಧಿಕಾ-ಯಶ್ ಜೊತೆಯಾಗಿ ಅಭಿನಯಿಸಿದ್ದಾರೆ. ಈ ಜಾಹೀರಾತುಗಳು ಈಗ ಪ್ರಸಾರ ಆರಂಭಿಸಿದ್ದು ಇಬ್ಬರ ಲುಕ್, ಕೆಮಿಸ್ಟ್ರಿಗೆ ಜನ ಫಿದಾ ಆಗಿದ್ದಾರೆ.
ಯಶ್ ಅಟೋ ಚಾಲಕನಂತೆ ಪಕ್ಕಾ ಮಾಸ್ ಲುಕ್ ನಲ್ಲಿದ್ದರೆ ರಾಧಿಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವಿರಲಿ, ಜಾಹೀರಾತಿರಲಿ, ಇವಿರಬ್ಬರೂ ತೆರೆ ಮೇಲೆ ಇದ್ದರೆ ಕಣ್ಣಿಗೆ ಹಬ್ಬ ಎನ್ನುತ್ತಿದ್ದಾರೆ ಫ್ಯಾನ್ಸ್.