ಬಿಜೆಪಿ ಪರ ಪ್ರಚಾರ ಮಾಡಲಿರುವ ಸುದೀಪ್ ಸಿನಿಮಾ, ಶೋಗೆ ತಡೆ ಇಲ್ಲ
ಆದರೆ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಸುದೀಪ್ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ವಿಧಿಸಲು ನಕಾರ ಹೇಳಿದೆ.
ಸುದೀಪ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಮತ್ತು ಯಾವುದೇ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡಿಲ್ಲ. ಕೇವಲ ಸಿಎಂ ಬೊಮ್ಮಾಯಿ ಮೇಲಿನ ಅಭಿಮಾನದಿಂದ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರಷ್ಟೇ. ಹೀಗಾಗಿ ಅವರ ಚಿತ್ರ, ಜಾಹೀರಾತುಗಳಿಗೆ ನಿರ್ಬಂಧ ವಿಧಿಸಲು ಚುನಾವಣಾ ಆಯೋಗ ನಿರಾಕರಿಸಿದೆ.