ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಗೆ ನೋ ಆಪರೇಷನ್

Krishnaveni K

ಭಾನುವಾರ, 15 ಡಿಸೆಂಬರ್ 2024 (15:46 IST)
ಬೆಂಗಳೂರು: ಬೆನ್ನು ನೋವಿನ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ನಟ ದರ್ಶನ್ ಗೆ ಈಗ ರೆಗ್ಯುಲರ್ ಜಾಮೀನು ಕೂಡಾ ಸಿಕ್ಕಿದೆ. ಅದರ ಬೆನ್ನಲ್ಲೆ ಅವರಿಗೆ ಆಪರೇಷನ್ ಮಾಡಲ್ಲ ಎಂಬ ಸುದ್ದಿ ಬಂದಿದೆ.

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬ ದೃಷ್ಟಿಯಿಂದಲೇ ಅವರಿಗೆ ಮೊದಲು ಮಧ್ಯಂತರ ಜಾಮೀನು ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳಾದರೂ ಆಪರೇಷನ್ ಆಗಿರಲಿಲ್ಲ. ಇದಕ್ಕೆ ಕಾರಣವನ್ನೂ ನ್ಯಾಯಾಲಯ ಕೇಳಿತ್ತು. ಆಗ ಬಿಪಿ ವೇರಿಯೇಷನ್ ಆಗುತ್ತಿದೆ ಎಂದು ಅವರ ಪರ ವಕೀಲ ಸಿವಿ ನಾಗೇಶ್ ಸಮಜಾಯಿಷಿ ನೀಡಿದ್ದರು.

ಇದೀಗ ದರ್ಶನ್ ಗೆ ಮೊನ್ನೆಯಷ್ಟೇ ರೆಗ್ಯುಲರ್ ಜಾಮೀನು ಸಿಕ್ಕಿದೆ. ಇದೀಗ ಅವರು ಶಸ್ತ್ರಚಿಕಿತ್ಸೆಗೊಳಗಾಗುತ್ತಿಲ್ಲ ಎನ್ನಲಾಗಿದೆ. ಅದರ ಬದಲು ಕನ್ಸರ್ವೇಟಿವ್ ಟ್ರೀಟ್ ಮೆಂಟ್ ಪಡೆಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ಸರ್ಜರಿ ಬದಲು, ಮಾತ್ರೆ, ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ನೀಡಲಾಗುತ್ತದೆ. ಅದರಂತೆ ಕೆಲವು ಕಾಲ ದರ್ಶನ್ ವಿಶ್ರಾಂತಿ ಪಡೆಯಬೇಕಾಗುತ್ತದೆ. ಆಪರೇಷನ್ ಮಾಡದೆಯೇ ಶಾಖ ಕೊಟ್ಟು ಚಿಕಿತ್ಸೆ ಮುಂದುವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ